6ರಂದು ನಿರ್ಗಮನ ಪಥ ಸಂಚಲನ

POLICE TRAINIG CENTER AML
Published on

ಚಿತ್ರದುರ್ಗ: ಐಮಂಗಲ ಪೊಲೀಸ್ ತರಬೇತಿ ಶಾಲೆ ಕವಾಯಿತು ಮೈದಾನದಲ್ಲಿ ಒಂದನೇ ತಂಡದ ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್‌ಗಳ ಮತ್ತು ಕೆಎಸ್‌ಐಎಸ್‌ಎಫ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನ ಮಾರ್ಚ್ 6ರ ಬೆಳಗ್ಗೆ 8 ಗಂಟೆಗೆ ಆಯೋಜಿಸಲಾಗಿದೆ.

ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಡಾ.ಎಸ್.ಪರಶಿವಮೂರ್ತಿ ಅವರು ಪಥ ಸಂಚಲನ ಪರಿವೀಕ್ಷಣೆ ಮತ್ತು ಬಹುಮಾನ ವಿತರಣೆ ಮಾಡುವರು. ಬೆಂಗಳೂರು ತರಬೇತಿ ಪೊಲೀಸ್ ಮಹಾನಿರೀಕ್ಷಕ ಪಿ.ಹರಿಶೇಖರನ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಪಿ.ಪಾಪಣ್ಣ ಉಪಸ್ಥಿತರಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net