ಕಲಾವಿದರ ನೆರವಿಗೆ ಒತ್ತಾಯ

MORARJI
Published on

ಚಿತ್ರದುರ್ಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಲಾವಿದರಿಗೆ ಆರ್ಥಿಕ ನೆರವು ಘೋಷಿಸುವಂತೆ ರಾಜ್ಯ ಕಲಾವಿದರ ಒಕ್ಕೂಟದ ಪ್ರಧಾನ ಕಾಯ ದರ್ರ್ಶಿ ಚಿನ್ನೋಬನಹಳ್ಳಿ ಮುರಾರ್ಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಕುಟುಂಬಗಳು ಕಲೆಯನ್ನೇ ಬದುಕನ್ನಾಗಿಸಿಕೊಂಡಿವೆ. ಈಗ ಕರೊನಾ ಸೋಂಕು ತಡೆಗಟ್ಟಲು ಲಾಕ್‌ಡೌನ್ ಮಾಡಿರುವುದರಿಂದಾಗಿ ಕಾರ್ಯಕ್ರಮಗಳಿಲ್ಲದೆ ಕಲಾವಿದರ ದೈನಂದಿನ ಜೀವನಕ್ಕೂ ಕಷ್ಟವಾಗಿದೆ. ಆದ್ದರಿಂದ ರೈತರಿಗೆ, ಕಟ್ಟಡ ಕಾರ್ಮಿಕರಿಗೆ ಘೋಷಿಸಿರುವ ನೆರವನ್ನು ಕಲಾವಿದರಿಗೂ ವಿಸ್ತರಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net