ಅಂಬೇಡ್ಕರ್ ಜ್ಯೋತಿ ಯಾತ್ರೆಗೆ ಸ್ವಾಗತ

ctd 6 bra jothi (1)
Published on

ಚಿತ್ರದುರ್ಗ: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 64ನೇ ಮಹಾ ಪರಿನಿರ್ವಾಣ ಅಂಗವಾಗಿ ಬೆಂಗಳೂರಿಂದ ಹೊರಟು ಮುಂಬಯಿ ದಾದರ್‌ನ ಅವರ ಸಮಾಧಿ ಸ್ಥಳ ‘ಚೈತನ್ಯಭೂಮಿ’ಯನ್ನು ತಲುಪಲಿರುವ ಅಂಬೇಡ್ಕರ್ ಜ್ಯೋತಿ ಯಾತ್ರೆಯನ್ನು ಶನಿವಾರ ಸಂಜೆ ಚಿತ್ರದುರ್ಗದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಸದಸ್ಯರು ಸ್ವಾಗತಿಸಿದರು.

ಕರ್ನಾಟಕ ದಲಿತ ಸಂಘನೆಗಳ ಒಕ್ಕೂಟ, ಕರ್ನಾಟಕ ರಕ್ಷಣಾ ಪಡೆ ಕಾರ‌್ಯಕರ್ತರ ಈ ಯಾತ್ರೆ ಒನಕೆ ಓಬವ್ವ ವೃತ್ತದಿಂದ ಅಂಬೇಡ್ಕರ್ ಪ್ರತಿಮೆ ತಲುಪಿತು.

ಈ ವೇಳೆ ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ, ವಿಶ್ವವೇ ಮೆಚ್ಚುವಂಥ ಮಹಾನ್ ಮಾನವತಾವಾದಿ ಅಂಬೇಡ್ಕರ್, ದಲಿತರ ಉದ್ಧಾರಕ್ಕಾಗಿ ಶಿಕ್ಷಣ, ಸಂಘಟನೆ, ಹೋರಾಟದ ಅಸ್ತ್ರಗಳನ್ನು ಕೊಟ್ಟಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ವಕೀಲ ಬೀಸ್ನಳ್ಳಿ ಜಯಪ್ಪ, ಮುಖಂಡರಾದ ಜಿ.ಒ.ಎನ್.ಮೂರ್ತಿ, ಮಹಾಂತೇಶ್, ಕೆ.ರುದ್ರಮುನಿ, ಬಿ.ಟಿ.ಸಂಪತ್‌ಕುಮಾರ್, ಬ್ಯಾಲಾಳ್ ಜಯಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net