ಕೇರಳ ಮಾದರಿ ನೆರವು ಕೊಡಿ

CTD 27 STRIKE
Published on

ಚಿತ್ರದುರ್ಗ: ಲಾಕ್‌ಡೌನ್‌ನಿಂದಾಗಿ ಸಂಷ್ಟಕ್ಕೆ ಸಿಲುಕಿರುವ ಜನತೆಗೆ ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಪ್ರಮುಖರು ಡಿಸಿ ಕಚೇರಿ ಬಳಿ ಬುಧವಾರ ಧರಣಿ ನಡೆಸಿದರು.

ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರ ಹಲವು ಬೇಡಿಕೆಗಳನ್ನು ಈಡೇರಿಸಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಬೇಕು, ಕನಿಷ್ಠ ಒಂದು ವರ್ಷ ಮಾಸಿಕ ಪ್ರತಿ ಕುಟುಂಬಕ್ಕೆ ರೇಷನ್ ಕೊಡಬೇಕು, ಕೇರಳ ಮಾದರಿ ಅಕ್ಕಿ ಜತೆಗೆ ಬೇಳೆ, ಎಣ್ಣೆ, ಸಕ್ಕರೆ ಉಪ್ಪು ಇತ್ಯಾದಿ 16 ಅವಶ್ಯ ವಸ್ತುಗಳನ್ನು ಕೊಡಬೇಕು.

ರೈತರು, ಕೃಷಿ ಕೂಲಿಕಾರರು, ಕಸಬುದಾರರು ಮತ್ತು ಸ್ತ್ರೀಶಕ್ತಿ ಗುಂಪುಗಳ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲ ವಸೂಲಿ ಸ್ಥಗಿತಗೊಳಿಸಿ, ಮುಂಗಾರು ಕೃಷಿಗೆ ಹೊಸ ಸಾಲ ಕೊಡುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು. ಬಳಿಕ ಎಡಿಸಿ ಸಿ.ಸಂಗಪ್ಪಗೆ ಮನವಿ ಸಲ್ಲಿಸಿದರು.

ಸಮನ್ವಯ ಸಮಿತಿ ಪ್ರಮುಖರಾದ ಟಿ.ನುಲೇನೂರು ಶಂಕ್ರಪ್ಪ, ಬಸ್ತಿಹಳ್ಳಿ ಸುರೇಶ್ ಬಾಬು, ಧನಂಜಯ, ಸಿ.ನಾಗರಾಜ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಟಿ.ಷಫಿವುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net