ಇಂದು ಎಪಿಎಂಸಿ ವಹಿವಾಟು ಇರದು

APMC CTD
Published on

ಚಿತ್ರದುರ್ಗ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವಹಿವಾಟಿನ ಸಂದರ್ಭದಲ್ಲಿ ಕರೊನಾ ಸೋಂಕು ಹತೋಟಿಗಾಗಿ ಪರಸ್ಪರ ಅಂತರ ಕಾಪಾಡಲು ಸ್ವಯಂ ಸೇವಾ ಸಂಸ್ಥೆಗಳಿಂದ ಸಮಿತಿ ಅರ್ಜಿ ಆಹ್ವಾನಿಸಿದೆ.

ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ವಯಂ ಸೇವಕರು ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಸಂಪರ್ಕಿಸಬಹುದು. ಸರ್ಕಾರದ ಆದೇಶದನ್ವಯ ಮೇ 24 ಹಾಗೂ 31 ಕೃಷಿ ಮಾರುಕಟ್ಟೆಯಲ್ಲಿ ವಹಿವಾಟು ಇರುವುದಿಲ್ಲ. ಆದ್ದರಿಂದ ಕ್ಯೂ ಬ್ಲಾಕ್‌ನಲ್ಲಿ ನಡೆಯುವ ಹೂವಿನ ಹಾಗೂ ಡಿ ಬ್ಲಾಕ್‌ನಲ್ಲಿ ಸಗಟು ಕಿರಾಣಿ ವ್ಯಾಪಾರಸ್ಥರು, ರೈತರು ಸಹಕರಿಸಬೇಕು ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net