

ಚಿತ್ರದುರ್ಗ: ಜನತಾ ಕರ್ಫ್ಯೂ ಹಾಗೂ ರಂಜಾನ್ ಹಬ್ಬದ ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸರು ಏರ್ಪಡಿಸಿರುವ ಬಂದೋಬಸ್ತ್ ಮಾಹಿತಿಯನ್ನು ಎಡಿಜಿಪಿ ಅಮರ್‌ಕುಮಾರ್ ಪಾಂಡೆ (ಕಾ-ಸು) ಶನಿವಾರ ಪಡೆದರು.
ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ರಾಜ್ಯಪ್ರವಾಸದಲ್ಲಿರುವ ಅವರು ಶನಿವಾರ ಚಿತ್ರದುರ್ಗಕ್ಕೆ ಭೇಟಿ ನೀಡಿ, ಡಿಪಿಒ ಕಚೇರಿಯಲ್ಲಿ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.
ಲಾಕ್‌ಡೌನ್ ಜಾರಿ ಇರುವ ಈ ಸನ್ನಿವೇಶದಲ್ಲಿ ಪೊಲೀಸ್ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ಪರಿಶೀಲಿಸಿದರು. ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳ ಬೇಕು. ಸಮಾಜ ಘಾತುಕ ಶಕ್ತಿಗಳೆಡೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ದಾವಣಗೆರೆ ಪೂರ್ವವಲಯದ ಐಜಿಪಿ ಎಸ್.ರವಿ, ಎಸ್ಪಿ ಜಿ.ರಾಧಿಕಾ, ಎಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್ಪಿಗಳಾದ ಪಾಂಡುರಂಗ, ರಮೇಶ್, ರೋಷನ್ ಜಮೀರ್, ಪಿಐಗಳಾದ ಪ್ರಕಾಶ್, ಟಿ.ಆರ್.ನಯೀಂ ಅಹಮದ್, ಗ್ರಾಮಾಂತರ ಸಿಪಿಐ ಬಿ.ವಿ.ಗಿರೀಶ್, ಹೊಳಲ್ಕೆರೆ ಸಿಪಿಐ ರವೀಶ್ ಸಹಿತ ಜಿಲ್ಲೆಯ ನಾನಾ ಪೊಲೀಸ್ ಅಧಿಕಾರಿಗಳಿದ್ದರು.