ತಂಬಾಕು ಉತ್ಪನ್ನ ಮಾರಾಟಕ್ಕೆ ಬಿತ್ತು ದಂಡ

TAMBAKU images
Published on

ಚಿತ್ರದುರ್ಗ: ಕೋಟ್ಟಾ ಕಾಯ್ದೆಯಡಿ ಹೊಳಲ್ಕೆರೆ ಹಾಗೂ ನಾಯಕನಹಟ್ಟಿ ಪಟ್ಟಣಗಳಲ್ಲಿ ಜಿಲ್ಲಾ ಮಟ್ಟದ ತನಿಖಾ ತಂಡ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, 62 ಪ್ರಕರಣಗಳನ್ನು ದಾಖಲಿಸಿ 6150 ರೂ. ದಂಡ ವಿಧಿಸಿದೆ.

ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಹೊಳಲ್ಕೆರೆ ಪಟ್ಟಣದಲ್ಲಿ 12 ಪ್ರಕರಣ ದಾಖಲಿಸಿ, 1150 ರೂ. ಹಾಗೂ ನಾಯಕನಹಟ್ಟಿಯಲ್ಲಿ 50 ಪ್ರಕರಣ ದಾಖಲಿಸಿ 5000 ರೂ. ದಂಡ ವಿಧಿಸಲಾಗಿದೆ. ಹೊಳಲ್ಕೆರೆ ತಾಲೂಕು ಆರೋಗ್ಯಾಧಿಕಾರಿ ಡಾ.ಎಲ್.ಜಯಸಿಂಹ, ಮುಖ್ಯಾಧಿಕಾರಿ ಎ.ವಾಸಿಂ, ಜಿಲ್ಲಾ ಸಲಹೆಗಾರ-ಬಿ.ಎಂ.ಪ್ರಭುದೇವ್, ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ, ಹೊಳಲ್ಕೆರೆ, ನಾಯಕನಹಟ್ಟಿ ಪೊಲೀಸರು ಹಾಗೂ ಆರೋಗ್ಯ ಸಹಾಯಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net