44 ಶಾಖೆಗಳಲ್ಲೂ ವಹಿವಾಟು ಸ್ಥಗಿತ

BANK 08
Published on

ಚಿತ್ರದುರ್ಗ: ಜಿಲ್ಲಾದ್ಯಂತ 44 ಶಾಖೆಗಳಲ್ಲೂ ಸೇವೆ ಸ್ಥಗಿತಗೊಳಿಸಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನೌಕರರು, ಸ್ಥಳೀಯವಗಿ ಪ್ರತಿಭಟನೆ ನಡೆಸಿ ಭಾರತ್ ಬಂದ್ ಬೆಂಬಲಿಸಿದರು.

ನಗರದ ಐಯುಡಿಪಿ ಬಡಾವಣೆಯಲ್ಲಿರುವ ಪ್ರಾದೇಶಿಕ ಕಚೇರಿ ಬಳಿ ಜಮಾಯಿಸಿದ ನೌಕರರು, ಕೇಂದ್ರ ಸರ್ಕಾರ ಜನವಿರೋಧಿ ನೀತಿ ಜಾರಿಗೊಳಿಸುತ್ತಿದೆ. ಇದರಿಂದ ಬ್ಯಾಂಕ್ ವ್ಯವಸ್ಥೆ ತೀವ್ರ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್ ಖಾಸಗಿಕರಣ ವಿರೋಧ ಸೇರಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿದ ಪ್ರತಿಭಟನಾ ನಿರತರು, ತಕ್ಷಣ ನೌಕರರ ಹಿತಕಾಯಲು ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಕೀರ್ತಿರಾಜ್, ಕಿರಣ್, ಸುರೇಶ್‌ಬಾಬು, ಬೊಮ್ಮಾಯಿ, ಮಹಾಂತೇಶ್ ಶಾಸ್ತ್ರಿ, ಬಾಲಕೃಷ್ಣ, ಮಧುಸೂಧನ್, ಶಂಕರಪ್ಪ, ಓಬನಾಯಕ, ವೆಂಕಟೇಶ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net