ಉಜ್ಜಯಿನಿ ಶ್ರೀ ಅಡ್ಡಪಲ್ಲಕ್ಕಿ ಉತ್ಸವ

ctd 29 ujjayani sri (1)
Published on

ಚಿತ್ರದುರ್ಗ: ತಾಲೂಕಿನ ಜೆಎನ್‌ಕೋಟೆ ಗ್ರಾಮದಲ್ಲಿ ಬುಧವಾರ ಸಂಜೆ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ, ಸಂಭ್ರಮದಿಂದ ನೆರವೇರಿತು.

ಗ್ರಾಮದ ಶ್ರೀ ಕರಿಯಮ್ಮ ದೇವಿ ದೇವಾಲಯದ ಕಳಶ ಪ್ರತಿಷ್ಠಾನ ಮಹೋತ್ಸವದ ಅಂಗವಾಗಿ ಜ.27ರಿಂದ 30ರ ವರೆಗೆ ಗ್ರಾಮಸ್ಥರು ನಾನಾ ಧಾರ್ಮಿಕ ವಿಧಿಗಳನ್ನು ಆಯೋಜಿಸಿದ್ದು, ಶ್ರದ್ಧಾಭಕ್ತಿ ಹಾಗೂ ಅತ್ಯಂತ ವಿಜೃಂಭಣೆಯಿಂದ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.

ವೀರಗಾಸೆ ಮತ್ತಿತರ ಜಾನಪದ ಕಲಾ ತಂಡಗಳು, ಪೂರ್ಣಕುಂಭಗಳನ್ನು ಹೊತ್ತ ನೂರಾರು ಮಹಿಳೆಯರು, ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ಹಲವು ರಸ್ತೆಗಳ ಮೂಲಕ ದೇವಾಲಯವರೆಗೆ ಉತ್ಸವ ನಡೆಯಿತು. ಗ್ರಾಮದ ಪ್ರಮುಖರು, ಗ್ರಾಪಂ, ತಾಪಂ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಉತ್ಸವದಲ್ಲಿ ಇಂದು: ಜ.30ರಂದು ಬ್ರಾಹ್ಮೀ ಮಹೂರ್ತ ಶುಭಾಂಶದಲ್ಲಿ ಶ್ರೀ ಜಗದ್ಗುರುಗಳ ಅಮೃತ ಹಸ್ತದಿಂದ ಕಳಶ ಸ್ಥಾಪನೆ ಮತ್ತು ಶ್ರೀ ಶನೈಚ್ಛರ ಸ್ವಾಮಿ ದೇವಸ್ಥಾನದ ಕಳಶ ಸ್ಥಾಪನೆ, ಬೆಳಗ್ಗೆ 9 ಗಂಟೆಗೆ ಹೂಮಾದಿಗಳ ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net