ಲಾಕ್‌ಡೌನ್ ಇನ್ನಷ್ಟು ಬಿಗಿಗೊಳ್ಳಬೇಕು

PRABHAKAR valmiki nigama maji directore mlk
Published on

ಚಿತ್ರದುರ್ಗ: ಗುಜರಾತಿನಿಂದ ಕರೆತಂದಿರುವ ತಬ್ಲಿಘಿಗಳಲ್ಲಿ ಆರು ಮಂದಿಗೆ ಪಾಸಿಟಿವ್ ಬಂದಿರುವುದು ತೀವ್ರ ಆತಂಕ ಸೃಷ್ಟಿಸಿದೆ ಎಂದು ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಪ್ರಭಾಕರ ತಿಳಿಸಿದ್ದಾರೆ.

ಆದ್ದರಿಂದ ಪೊಲೀಸ್, ಆರೋಗ್ಯ ಇಲಾಖೆ ತಕ್ಷಣ ಜಿಲ್ಲೆಯಲ್ಲಿ ಬಿಗಿ ಕ್ರಮಕೈಗೊಳ್ಳಬೇಕು. ಆಂಧ್ರಪ್ರದೇಶದ ಜನತೆ ಜಿಲ್ಲೆಗೆ ನುಸುಳುತ್ತಿರುವುದು ಕಂಡುಬಂದಿದೆ. ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳ ಸುತ್ತಲೂ ಆಂಧ್ರಪ್ರದೇಶ ಹಳ್ಳಿಗಳು ಸಮೀಪದಲ್ಲಿವೆ.

ಆದ್ದರಿಂದ ಅಲ್ಲಿಂದ ಜನ ಜಿಲ್ಲೆ ಪ್ರವೇಶಿದಂತೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ಜತೆಗೆ ಜಿಲ್ಲೆಯೊಳಗೆ ಲಾಕ್‌ಡೌನ್ ಇನ್ನಷ್ಟು ಬಿಗಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net