ನಾಳೆ ಟೌನ್ ಕೋ-ಆಪ ಸೊಸೈಟಿ ಚುನಾವಣೆ

NISHANI JAYANNA
Published on

ಚಿತ್ರದುರ್ಗ: ಚಿತ್ರದುರ್ಗ ಟೌನ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಸ್ಥಾನಗಳಿಗೆ ಫೆ.17ರಂದು ಚುನಾವಣೆ ನಡೆಯಲಿದ್ದು ತಮ್ಮ ಗುಂಪಿನ 12 ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಅಭ್ಯರ್ಥಿ ಎಂ.ನಿಶಾನಿ ಜಯಣ್ಣ ಮನವಿ ಮಾಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಷ್ಟದಲ್ಲಿದ್ದ ಸೊಸೈಟಿಯನ್ನು ಲಾಭದತ್ತ ಕೊಂಡೊಯುತ್ತಿದ್ದು, ತಮ್ಮ ಗುಂಪನ್ನು ಗೆಲ್ಲಿಸುವ ಮೂಲಕ ಇದಕ್ಕೆ ಮತ್ತಷ್ಟು ಬಲ ನೀಡಬೇಕು ಎಂದರು.

2229 ಸದಸ್ಯರ ಪೈಕಿ 95 ಸದಸ್ಯರು ಮಾತ್ರ ಚುನಾವಣೆ ಅರ್ಹರಾಗಿದ್ದರು. ಆದರೀಗ ಹೈಕೋರ್ಟ್ ತೀರ್ಪು ಪ್ರಕಾರ 1033 ಸದಸ್ಯರಿಗೆ ಮತದಾನದ ಅರ್ಹತೆ ಇದೆ ಎಂದು ತಿಳಿಸಿದರು.

1.50 ಕೋಟಿ ರೂ. ಗೂ ಅಧಿಕ ಸಾಲವಿದ್ದ ಸೊಸೈಟಿಯನ್ನು ಲಾಭದತ್ತ ಕೊಂಡೊಯ್ದಿದ್ದೇವೆ. 107ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಸೊಸೈಟಿ ವಹಿವಾಟಿನಲ್ಲಿ ರಾಜ್ಯದಲ್ಲಿ 2ನೇ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ವಾಣಿಜ್ಯ ಮಳಿಗೆಗಳಿಂದ ಮಾಸಿಕ 2.80 ಲಕ್ಷ ರೂ. ಬಾಡಿಗೆ ಬರುತ್ತಿದೆ ಎಂದರು.

ಶಶಿಧರ್, ಹರೀಶ್, ಆಶ್ರಫ್ ಖಾದ್ರಿ, ನಾಗರಾಜ್ ಬೇದ್ರೆ, ಜಿ.ಸಿ.ಸುರೇಶ್‌ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net