

ಚಿತ್ರದುರ್ಗ: ಯಾವುದೇ ಆತಂಕವಿಲ್ಲದೆ ವಾರ್ಷಿಕ ಪರೀಕ್ಷೆಯನ್ನು ಎದುರಿಸುವಂತೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆತ್ಮಸೈರ್ಯದ ಮಾತು ಹೇಳಿದ್ದಾರೆ.
ಗುರುವಾರದಿಂದ ಪರೀಕ್ಷೆ ಆರಂಭವಾಗಲಿದ್ದು, ಕೋವಿಡ್ ಸೋಂಕು ತಂದಿಟ್ಟಿರುವ ಅತಂತ್ರ ಸ್ಥಿತಿಯಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಜರ್ಝರಿತರಾಗಿದ್ದಾರೆ.
ಆದರೂ ಶಿಕ್ಷಣ ಸಚಿವರು, ಇಲಾಖೆ ಅಧಿಕಾರಿಗಳು, ಶಿಕ್ಷಕರು ವಿಶೇಷ ಪರಿಶ್ರಮ ಹಾಕಿ ಮಕ್ಕಳ ಮನೋಸ್ಥಿತಿ ಹಳಿ ತಪ್ಪದಂತೆ ಎಚ್ಚರದಿಂದ ಮಾರ್ಗದರ್ಶನ ಮಾಡಿದ್ದಾರೆ. ಪಾಲಕರೂ ಧೈರ್ಯ ತುಂಬಿದ್ದಾರೆ. ಇದೆಲ್ಲದರ ನಡುವೆಯೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಭ ಯ ಇದ್ದೇ ಇರುತ್ತದೆ.
ಆದರೆ, ಯಾವುದೇ ಆತಂಕ ಅನಗತ್ಯ ಎಂಬುದನ್ನು ಮಕ್ಕಳು ಅರಿಯಬೇಕು. ಪರೀಕ್ಷೆ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಒಂದು ಮೌಲ್ಯಮಾಪನವಾಗಿದ್ದು, ಅರ್ಥ ಮಾಡಿಕೊಂಡಿರುವುದನ್ನೇ ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆದರೆ ಯಶಸ್ಸು ನಿಮ್ಮ ಪಾಲಿಗೆ ಸಿಕ್ಕೇ ಸಿಗುತ್ತದೆ ಎಂದು ಸ್ವಾಮೀಜಿ,ವಿದ್ಯಾರ್ಥಿಗಳನ್ನು ಆಶೀರ್ವದಿಸಿದ್ದಾರೆ.