ಮೈಸೂರಿನಲ್ಲಿ ಜ.26 ರಿಂದ ಚಿತ್ರಸಂತೆ: ಕಲಾವಿದರಿಂದ ಅರ್ಜಿ ಆಹ್ವಾನ

Chitra Santhe
Published on

ಮೈಸೂರು: ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿರುವ ‘ಮೈಸೂರು ಫೆಸ್ಟ್’ ಪ್ರಯುಕ್ತ ಜ.26 ರಿಂದ 28ರವರೆಗೆ ಮಾನಸಗಂಗೋತ್ರಿಯ ಕ್ಲಾಕ್‌ಟವರ್ ಮುಂಭಾಗ ಚಿತ್ರಸಂತೆ ಹಮ್ಮಿಕೊಳ್ಳಲಾಗಿದೆ.

ಚಿತ್ರಸಂತೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಕಲಾವಿದರು ಜ.8 ರಿಂದ 16ರೊಳಗೆ ಈ ಲಿಂಕ್ https://forms.gle/M4LJ2dsXfkBEgmZn9 ಬಳಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಚಿತ್ರಸಂತೆಯಲ್ಲಿ ಆಯ್ದ 30 ಕಲಾವಿದರಿಗೆ ಅವಕಾಶ ಮಾಡಿಕೊಡಲಾಗುವುದು. ಮಾಹಿತಿಗೆ ಮೊ: 74115 64510 ಸಂಪರ್ಕಿಸಬಹುದು ಎಂದು ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net