ಚಿತ್ರಸಂತೆಗೆ ಸಜ್ಜಾಗುತ್ತಿದೆ ವೇದಿಕೆ : ಕುಮಾರಕೃಪಾ ರಸ್ತೆಯಲ್ಲಿ ಜ. 5ರಂದು ಆಯೋಜನೆ

New Project (27)
Published on

ಬೆಂಗಳೂರು: ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಚಿತ್ರಸಂತೆ ಸಮೀಪಿಸುತ್ತಿದೆ. ಕುಮಾರಕೃಪಾ ರಸ್ತೆಯಲ್ಲಿ ಪ್ರತಿ ವರ್ಷದಂತೆ ಜನವರಿ ಮೊದಲ ಭಾನುವಾರ (ಜ. 5) ‘22ನೇ ರಾಷ್ಟ್ರೀಯ ಚಿತ್ರಸಂತೆ’ ನಡೆಸಲು ಕರ್ನಾಟಕ ಚಿತ್ರಕಲಾ ಪರಿಷತ್ತು ನಿರ್ಧರಿಸಿದೆ.

ಚಿತ್ರ ಮಾಧ್ಯಮವು ನೋಡುಗರ ಮೇಲೆ ಹೆಚ್ಚು ಪ್ರಭಾವ ಬೀರುವುದರಿಂದ ಈ ಮಾಧ್ಯಮವನ್ನು ಬಳಸಿಕೊಂಡು ಪ್ರತಿ ವರ್ಷವೂ ಒಂದೊಂದು ಸಂದೇಶ ಸಾರುವ ವಿಶೇಷ ಪರಿಕಲ್ಪನೆಯಡಿ ಚಿತ್ರಸಂತೆ ಆಯೋಜಿಸಲಾಗುತ್ತದೆ. ಈ ಬಾರಿ ‘ಹೆಣ್ಣಿನ ರಕ್ಷಣೆ ಪ್ರತಿಯೊಬ್ಬರ ಹೊಣೆ’ ಎಂಬುದನ್ನು ತಿಳಿಸಲು ಪರಿಷತ್ತು ಮುಂದಾಗಿದೆ. ಬಾಲ್ಯ ವಿವಾಹ, ಹೆಣ್ಣು ಭ್ರೂಣಹತ್ಯೆಯಂತಹ ಕೆಲವು ಸಾಮಾಜಿಕ ಅನಿಷ್ಟ ಪದ್ಧತಿಗಳ ಕುರಿತು ಚಿತ್ರಸಂತೆ ಬೆಳಕು ಚೆಲ್ಲಲಿದೆ.

ಪ್ರತಿ ಬಾರಿಯಂತೆ ಚಿತ್ರಕಲಾ ಪರಿಷತ್ತಿನ ರಸ್ತೆಯುದ್ದಕ್ಕೂ ಇಡೀದಿನ ನಡೆಯಲಿರುವ ಚಿತ್ರ ಸಂತೆಗೆ ಚಿತ್ರಕಲಾ ವಿದ್ಯಾರ್ಥಿಗಳು, ಕಲಾಸಕ್ತರು ಸೇರಿ ಲಕ್ಷಾಂತರ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ.

ಮೂರು ಸಾವಿರ ಅರ್ಜಿ:

ಈ ಬಾರಿ ಚಿತ್ರಸಂತೆಗೆ ಬೆಂಗಳೂರು ಸೇರಿ ಹೊರ ರಾಜ್ಯ ಹಾಗೂ ಹೊರ ರಾಷ್ಟ್ರಗಳಿಂದಲೂ ಅರ್ಜಿಗಳು ಬಂದಿದ್ದವು. ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಚಿತ್ರಸಂತೆಯಲ್ಲಿ 1,300 ಮಳಿಗೆ ತೆರೆಯಲಷ್ಟೇ ಅವಕಾಶವಿದ್ದು, ನಿರ್ದಿಷ್ಟ ಮಾನದಂಡಗಳನ್ನು ಆಧರಿಸಿ ಅರ್ಹ ಕಲಾವಿದರನ್ನು ಆಯ್ಕೆ ಮಾಡಲು ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಗುಣಮಟ್ಟದ ಚಿತ್ರಗಳಿಗೆ ಆದ್ಯತೆ ನೀಡಲಿದೆ ಎಂದು ಪರಿಷತ್ತು ಮೂಲಗಳು ತಿಳಿಸಿವೆ.

ಆದ್ಯತೆಯ ಕಲಾ ಚಿತ್ರಗಳು:

ಚಿತ್ರಸಂತೆಯಲ್ಲಿ ಸಾಂಪ್ರದಾಯಿಕ ಮೈಸೂರು ಶೈಲಿಯ ಕಲೆ, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು, ಆಕ್ರಿಲಿಕ್, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಕೊಲಾಜ್, ಲಿಥೋಗ್ರ್ಾ, ಡೂಡಲ್, ಎಂಬೋಸಿಂಗ್, ವಿಡಿಯೋ ಕಲೆ, ಗ್ರಾಫಿಕ್ ಕಲೆ, ಶಿಲ್ಪ ಕಲೆ, ಪ್ರತಿಷ್ಠಾಪನಾ ಕಲೆ, ರ್ಪಾರ್ಮೆನ್ಸ್ ಕಲೆ, ಮಿಶ್ರ ಮಾಧ್ಯಮ, ೆಟೋಗ್ರಫಿ ಹೀಗೆ ಹಲವು ಬಗೆಯ ಕಲಾ ಪ್ರಕಾರಗಳಿಗೆ ಆದ್ಯತೆ ನೀಡಲಾಗುತ್ತದೆ. ಒಂದೇ ಸೂರಿನಡಿ ಈ ಎಲ್ಲ ಬಗೆಯ ಚಿತ್ರಗಳು ನೋಡುಗರ ಗಮನ ಸೆಳೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net