ರಾಮನಗರ: ವೃದ್ದರನ್ನು ವಿದ್ಧಾಶ್ರಮಕ್ಕೆ ಸೆರಿದಬೇಡಿ ಎಂದು ಅರಿವು ಮೂಡಿಸುವ ಸಲುವಾಗಿ ದೇಶಾಧ್ಯಂತ ಬೈಕ್ ನಲ್ಲಿ ಸಂಚಾರ ಮಾಡಿ, ರಾಮನಗರಕ್ಕೆ ಮರಳಿದ ಚಿತ್ರಾರಾವ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಸುಮಾರು ಎರಡು ತಿಂಗಳ ಕಾಲದ ದೇಶದ ಹಲವಾರು ರಾಜ್ಯಗಳಲ್ಲಿ ಬೈಕ್ ನಲ್ಲಿಯೇ ಏಕಾಂಗಿಯಾಗಿ ಪರ್ಯಟನೆ ಮಾಡಿದ ಚಿತ್ರಾರಾವ್ ಅವರನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಸಿಎಂ ಲಿಂಗಪ್ಪ ಸೇರಿದಂತೆ ಹಲವಾರು ಗಣ್ಯರು ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಲಿಂಗಪ್ಪ, ದೃಢ ನಿರ್ಧಾರದಿಂದ ಹೆಜ್ಜೆ ಇಟ್ಟು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಚಿತ್ರಾರಾವ್ ರಾಮನಗರಕ್ಕೆ ಕೀರ್ತಿ ತಂದಿದ್ದಾರೆ ಎಂದು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ತಿಳಿಸಿದರು.
ರಾಮನಗರದ ವಿಜಯನಗರ ಆಂಜನೇಯ ಆರ್ಚ್ ಬಳಿ ಶುಕ್ರವಾರ ಬೈಕ್ ರೈಡ್ ಮೂಲಕ ವೃದ್ಧ ತಂದೆ ತಾುಗಳನ್ನು ಪೋಷಣೆ ಮಾಡಿ ಅನಾಥ ಆಶ್ರಮದ ಕಡೆ ಮುಖ ಮಾಡಿಸಬೇಡಿ ಎಂದು ಕನ್ಯಾಕುಮಾರಿುಂದ ಕಾಶ್ಮೀರದವರೆಗೂ ಒಬ್ಬಂಟಿಯಾಗಿ ಸಂಚರಿಸಿ ಸಂದೇಶ ಸಾರಿ ರಾಮನಗರಕ್ಕೆ "ಂತಿರುಗಿದ ನೃತ್ಯ ಕಲಾ"ದೆ ರಾಮನಗರದ ಚಿತ್ರಾರಾವ್ ಅವರನ್ನು ಸ್ವಾಗತಿಸಿ ಸನ್ಮಾಸಿದ ಸಂಧರ್ಭದಲ್ಲಿ ಮಾತನಾಡಿದರು.
ಒಬ್ಬ ಹೆಣ್ಣುಮಗಳು 4800 ಕಿ ಮೀ. ದೂರ ದೇಶದ ಉದ್ದಗಲಕ್ಕೂ ಒಬ್ಬಂಟಿಯಾಗಿ ಸಂಚರಿಸಿ ಉತ್ತಮ ಸಂದೇಶ ಸಾರುವ ಮೂಲಕ ಸಮಾಜಕ್ಕೆ ವೃದ್ಧ ತಂದೆ ತಾುಗಳ ಪಾಲನೆ ಪೋಷಣೆ ಮಹತ್ವವನ್ನ ಯುವ ಜನರಿಗೆ ತಿಳಿಸುವ ಕೆಲಸ ಮಾಡಿದ್ದಾರೆ. ಇದು ಕೇವಲ ಸಾಮಾನ್ಯ ಸಾಧನೆಯಲ್ಲ ಒಬ್ಬ ಹೆಣ್ಣುಮಗಳ ಅದರಲ್ಲೂ ರಾಮನಗರದ ಹೆಣ್ಣುಮಗಳ ಅಸಾಮಾನ್ಯ ಸಾಧನೆ ಎಂದು ತಿಳಿಸಿದರು.
ಎಂ.ಐ.ಸಿ.ಸಿ. ಮಾಜಿ ಅಧ್ಯಕ್ಷ ಕೆ. ಶೇಷಾದ್ರಿ, ರೈತ ಮುಖಂಡೆ ಅನಸೂಯಮ್ಮ , ಬಾಷ್ ಕಂಪನಿ ಅಧಿಕಾರಿ ಡಾ. ಪುಂಡಲೀಕ ಕಾಮತ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಕರುನಾಡಸೇನೆ ಐಜೂರು ಜಗದೀಶ್, ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ರಾ.ಶಿ. ಬಸವರಾಜು, ಹೊಂಬೆಳಕು ಪೋಲೀಸ್ ಸುರೇಶ್, ಸಾಂಸ್ಕೃತಿಕ ಸಂಘಟಕಿ ಕವಿತಾರಾವ್, ವಕೀಲ ಶೇಷಾದ್ರಿ ಅಯ್ಯರ್, ಶಿಕ್ಷಕರಾದ ಕಾಂತರಾಜು, ವಾಸು, ಲಿಂಗರಾಜು ಮುಂತಾದವರು ಇದ್ದರು. ಸ್ವಾಗತಕೋರಿದರು.