ಮೂಡಲಗಿ,ಶಿವಾಪುರದಲ್ಲಿ ಚಿರತೆ ಓಡಾಟ; ಜನರಲ್ಲಿ ಆತಂಕ

Screenshot_20230808_202033_WhatsApp.jpg
Published on

ಬೆಳಗಾವಿ: ‌ಮೂಡಲಗಿ,ಶಿವಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿರುವ ವಿಡಿಯೋ ವೈರಲ್ ಬೆನ್ನಲ್ಲೇಗ್ರಾಮಸ್ಥರಿಗೆ ಅರಣ್ಯ ಇಲಾಖೆ, ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಶಿವಾಪುರ ಗ್ರಾಮದ ಕಬ್ಬು, ಮೆಕ್ಕಜೋಳ ಹಾಗೂ ಖಾಲಿ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿರುವ ವೈರಲ್ ಆಗಿದೆ. ಅಲ್ಲದೆ, ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ, ಪೊಲೀಸರು ಚಿರತೆ ಹಿಡಿಯಲು ಕಾರ್ಯಚರಣೆ ಕೈಗೊಂಡಿದ್ದಾರೆ. ಅಲ್ಲದೆ, ಚಿರತೆ ಓಡಾಡಿರುವ ಪ್ರದೇಶಗಳಲ್ಲಿ ಜನರು ಓಡಾಡದಂತೆ, ಕೃಷಿ ಜಮೀನುಗಳಲ್ಲಿ ಕೆಲಸ ಮಾಡದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net