ಚಿರ್ತನಾಳದಲ್ಲಿ ಕಲುಷಿತ ನೀರು ಪೂರೈಕೆ

21SND-03
Published on

ಸಿಂಧನೂರು: ಚಿರ್ತನಾಳ ಗ್ರಾಮದಲ್ಲಿ ಎರಡು ದಿನಗಳಿಂದ ಕಲುಷಿತ ನೀರು ಪೂರೈಕೆ ಮಾಡುತ್ತಿದ್ದು, ಇದರಿಂದ ವಾಂತಿ, ಭೇದಿಯಾಗುವ ಆತಂಕ ಜನರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮಕ್ಕೆ ಓವರ್‌ಹೆಡ್ ಟ್ಯಾಂಕ್‌ನಿಂದ ಪೂರೈಕೆ ಮಾಡುವ ಕಲುಷಿತವಾಗಿವೆ. ಚರಂಡಿ ತ್ಯಾಜ್ಯದಂತೆ ಗಬ್ಬುನಾರುತ್ತಿವೆ. ಮೊದಲಿದ್ದ ವ್ಯವಸ್ಥೆಯೊಂದಿಗೆ ಜೆಜೆಎಂ ಪೈಪ್‌ಲೈನ್ ಜೋಡಿಸಿದ ಬಳಿಕ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಗ್ರಾಪಂಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಗ್ರಾಮಸ್ಥರು ಕುಡಿವ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಇದೇ ನೀರು ನಿರಂತರ ಪೂರೈಕೆಯಾದರೆ ವಾಂತಿ, ಭೇದಿ ಕಂಡುಬರುವ ಸಾಧ್ಯತೆಗಳಿವೆ. ಕಳೆದ ಬೇಸಿಗೆಯಲ್ಲಿ ಕಲುಷಿತ ನೀರು ಪೂರೈಕೆ ಮಾಡಲಾಗಿತ್ತು. ಇದರಿಂದಾಗಿ ಗ್ರಾಮಸ್ಥರು ವಾಂತಿ, ಭೇದಿಯಿಂದ ಬಳಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net