ಸತ್ಯಸಾಯಿ ಸಂಸ್ಥೆಯಲ್ಲಿ ಪ್ರಾಣ ಉಳಿಸಿದ ಚಿರಂಜೀವಿ ಭವಃ ಕಾರ್ಯಕ್ರಮ

IMG-20250415-WA0025.jpg
Published on

ಚಿಕ್ಕಬಳ್ಳಾಪುರ: ಸತ್ಯಸಾಯಿ ಸಂಸ್ಥೆಯ ಸೇವಾ ಕಾರ್ಯಗಳು ಸಮಾಜಕ್ಕೆ ಆದರ್ಶ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಯಲ್ಲಿನ ಶ್ರೀ ಮಧುಸೂಧನ ಸಾಯಿ ವೈದ್ಯಕಿಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೈಗೊಂಡಿದ್ದ ಚಿರಂಜೀವಿ ಭವ ಜೀವನದ ಉಡುಗೊರೆ  ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಪ್ರಪಂಚದ ಭೂಪಟದಲ್ಲಿ ಚಿಕ್ಕಬಳ್ಳಾಪುರವು ವಿಶೇಷವಾಗಿ ಗುರುತಿಸುವಂತಾಗಲು ಸದ್ಗುರು ಶ್ರೀ ಮಧುಸೂದನ ಸಾಯಿ ಮಾನವೀಯ ಸೇವಾ ಸ್ಪಂದನೆಯು ಪ್ರಮುಖ ಕಾರಣಗಳಲ್ಲೊಂದಾಗಿದೆ. ಯಾವುದೇ ಒಂದು ಪ್ರದೇಶದ ಅದೃಷ್ಟ ಭಾಗ್ಯಕ್ಕೆ ಪ್ರಾಪ್ತಿ ಇರಬೇಕು. ಇದು ಸತ್ಯಸಾಯಿ ಸಂಸ್ಥೆಯಿಂದ ಸಿದ್ಧಿಯಾಗಿದೆ ಎಂದರು.
ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಗುರು ಶಿಷ್ಯ ಪರಂಪರೆಯ ಮಾದರಿಯಲ್ಲಿ ವಿದ್ಯಾಭ್ಯಾಸ ಸಿಗುತ್ತಿದೆ. ಕೇವಲ ಭೌತಿಕ ಶಿಕ್ಷಣ ಮಾತ್ರವಲ್ಲದೆ ಜೀವನ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಇದು ಗುರುಗಳು ಸಮಾಜಕ್ಕೆ ನೀಡುತ್ತಿರುವ ಅದ್ಭುತ ಉಡುಗೊರೆಯಾಗಿದೆ ಎಂದರು.
ಗಿಫ್ಟ್ ಆಫ್ ಲೈಫ್ - ಜೀವನದ ಉಡುಗೊರೆಯ ಚಿರಂಜೀವಿ ಭವ ಪ್ರಮಾಣ ಪತ್ರವನ್ನು ರೋಗದಿಂದ ಮುಕ್ತರಾದವರಿಗೆ ನೀಡಲಾಯಿತು.
ವೈದ್ಯಕಿಯ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಎ.ಆರ್.ರಘುಪತಿ, ಶೈಕ್ಷಣಿಕ ಮತ್ತು ಗುಣಮಟ್ಟ ನಿಯಂತ್ರಣ ವಿಭಾಗದ ನಿರ್ದೇಶಕ ಡಾ. ಸತೀಶ್ ಬಾಬು, ವೈದ್ಯಕಿಯ ಅಧೀಕ್ಷಕಿ ಡಾ. ಪದ್ಮಶ್ರೀ, ಮುಖ್ಯ ಸಂಪರ್ಕ ಅಧಿಕಾರಿ ಗೋವಿಂದ ರೆಡ್ಡಿ ಮತ್ತಿತರರು ಇದ್ದರು.

*ವಿಶೇಷ ಕಾರ್ಯಕ್ರಮ
ಚಿರಂಜೀವಿ ಭವ ಕಾರ್ಯಕ್ರಮವು ಐವರು ರೋಗಿಗಳ ಮರು ಹುಟ್ಟಿನ ಯಶೋಗಾಥೆಯಾಗಿದೆ. ಅಕಾಲಿಕ ಜನನದ ನವಜಾತ ಶಿಶುವನ್ನು ತೀವ್ರ ನಿಗಾ ಘಟಕದಲ್ಲಿ 52 ದಿನಗಳ ಕಾಲ ಇರಿಸಿ, ಆರೋಗ್ಯ ಕಾಪಾಡಲಾಗಿದೆ. ಹಾಗೆಯೇ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಹಾಗೂ ಹೃದ್ರೋಗಿ 10 ವರ್ಷದ ಬಾಲಕಿ, 32 ವರ್ಷದ ಮಹಿಳೆ ಇಬ್ಬರಿಗೂ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ನಾಲಿಗೆಯ ಕ್ಯಾನ್ಸರ್ನಿಂದ ಬಳಲುತ್ತಿರುವ 59 ವರ್ಷದ ವ್ಯಕ್ತಿಯ ಜೀವವನ್ನು ಕಾಪಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net