2 ವರ್ಷ ನೆನಪುಗಳಲ್ಲೇ ಕಳಿದಿದ್ದೀವಿ, ನಮ್ಮ ಅಣ್ಣಾ ಎಲ್ಲೂ ಹೋಗಿಲ್ಲ, ಎಲ್ಲೋ ಶೂಟಿಂಗ್ ಹೋಗಿದ್ದಾನೆ: ಅಣ್ಣನ ನೆನೆದು ಧ್ರುವ ಸರ್ಜಾ ಭಾವುಕ ನುಡಿ

Dhruva sarja
Published on

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಎರಡು ವರ್ಷ. ಅಂದಿನಿಂದ ಇಂದಿನವರೆಗೆ ಹಾಗೂ ಮುಂದೆಯೂ ಅಣ್ಣನ ನೆನಪು ಸದಾ ಇರುತ್ತೆ ಎಂದು ಧ್ರುವ ಸರ್ಜಾ ಅಣ್ಣನನ್ನು ನೆನಪಿಸಿಕೊಂಡಿದ್ದಾರೆ.

ಎರಡು ವರ್ಷಗಳಲ್ಲಿ ನಾವು ನೆನಪಿನಲ್ಲೇ ಕಳೆದಿದ್ದೇವೆ, ಮನೆಯಲ್ಲಿ ಹೇಗೆ ಇದ್ದೀರಾ, ಚೆನ್ನಾಗಿದ್ದೀರಾ ಅಂತ ಕೇಳೋದೇ ಬಿಟ್ಟಿದ್ದೇವೆ. ನಮ್ಮ ಅಣ್ಣಾ ಎಲ್ಲೂ ಹೋಗಿಲ್ಲ, ಎಲ್ಲೋ ಶೂಟಿಂಗ್ ಹೋಗಿದಾನೆ ಅನಿಸುತ್ತದೆ ಎಂದು ಭಾವುಕ ನುಡಿಗಳನ್ನಾಡಿದ್ದಾರೆ. ತಂದೆ ತಾಯಿಗಿಂತ ಅಣ್ಣನ ಜೊತೆಯಲ್ಲೇ ಹೆಚ್ಚು ಕಾಲ ಕಳೆದಿದ್ದೇನೆ. ಬೋರ್ಡಿಂಗ್ ನಲ್ಲೂ ಒಟ್ಟಿಗೆ ಇದ್ದೆವು,

ಏಕೆಂದರೆ ನಮ್ಮಣ್ಣ ಇದ್ದಿದ್ದರೆ ಹೇಗೆ ಇರುತ್ತಿತ್ತು ಎಂದು ನೆನಪಿಸಿಕೊಂಡರೆ ರಾಯನ್​​ನನ್ನು ನೋಡಿದ್ರೆ ಖುಷಿಗಿಂತ ಜಾಸ್ತಿ ಬೇಜಾರ್ ಆಗುತ್ತೆ. ಅವನ ಕೊನೆ ಸಿನಿಮಾದಲ್ಲಿ ಧ್ವನಿ ಕೊಡುವುದು ತುಂಬಾ ಕಷ್ಟ ಆಯಿತು. ಕೊನೇವರೆಗೂ ನಿಮ್ಮ ಜೊತೆಗೇ ಇರ್ತೀನಿ ಎಂದು ಹೇಳಲು ಸಾಧ್ಯನೇ ಆಗಲಿಲ್ಲ.ಅವನೊಬ್ಬ ಅದ್ಭುತ ವ್ಯಕ್ತಿತ್ವ, ಅವನನ್ನು ವರ್ಣಿಸಲು ಸಾಧ್ಯ ಇಲ್ಲ ಎಂದು ತಮ್ಮ ಅಗಲಿದ ಸಹೋದರನನ್ನು ಧ್ರುವಸರ್ಜಾ ನೆನಪಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net