ಚಿರಬಿ ಶ್ರೀ ಮೂಗಬಸವೇಶ್ವರ ರಥೋತ್ಸವ ರದ್ದು

vijayanagar dc divakr
ಜಿಲ್ಲಾಧಿಕಾರಿ ದಿವಾಕರ ಎಂ.ಎಸ್.
Published on

ಕೊಟ್ಟೂರು: ಇದೇ 11ರಂದು ನಡೆಯಬೇಕಿದ್ದ ಚಿರಬಿ ಗ್ರಾಮದ ಶ್ರೀ ಮೂಗಬಸವೇಶ್ವರ ಸ್ವಾಮಿ ರಥೋತ್ಸವವನ್ನು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ರಥೋತ್ಸವದ ನಿಮಿತ್ತ ಸೆ.12, 13ರಂದು ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ಹಾಗೂ ಪಲ್ಲಕ್ಕಿ ಉತ್ಸವ ಸೇರಿದಂತೆ ಇತರ ಕಾರ್ಯಕ್ರಮಗಳನ್ನೂ ರದ್ದುಪಡಿಸಲಾಗಿದೆ. ಮೂಗಬಸವೇಶ್ವರ ಸ್ವಾಮಿ ಪೂಜಾ ಕಾರ್ಯಕ್ರಮಕ್ಕೆ ಸಂಬಂಧಿಸಿ 2007ರಲ್ಲಿ ರಾಂಪುರ ಮತ್ತು ಚಿರಬಿ ಗ್ರಾಮಸ್ಥರ ನಡುವೆ ಉಂಟಾದ ಸಮಸ್ಯೆ ಕೋರ್ಟ್ ಮೆಟ್ಟಿಲೇರಿದ್ದು, ಇನ್ನೂ ಇತ್ಯರ್ಥವಾಗಿಲ್ಲ.

ಈ ಸಂಬಂಧ ಅಧಿಕಾರಿಗಳು ಹಲವಾರು ಬಾರಿ ಎರಡು ಗ್ರಾಮಸ್ಥರ ಸಭೆ ಕರೆದು ಸೌಹಾರ್ದ ಮೂಡಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ರಥೋತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಡಿಸಿ ರದ್ದುಪಡಿಸಿದ್ದು, ದೇವರ ದರ್ಶನ ಪಡೆದುಕೊಂಡು ಹೋಗಲು ಯಾವುದೇ ನಿರ್ಬಂಧವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net