

ವಿಜಯವಾಣಿ ಸುದ್ದಿಜಾಲ ಉಡುಪಿ
ಆಚಾರ್ಯ ಮಧ್ವರು ಶ್ರೇಷ್ಠ ವೇದ ಪಾರಂಗತರಾಗಿದ್ದರು. ಸಮಾಜದ ಅಂಕು-ಡೊಂಕು ತಿದ್ದಿ ಸಾಮರಸ್ಯದ ಬದುಕು ಕಾಣುವಲ್ಲಿ ಅವರ ತತ್ತ್ವ ಸಂದೇಶ ಎಂದೆಂದಿಗೂ ಪ್ರಸ್ತುತ. ಅಧ್ಯಾತ್ಮ ಜ್ಞಾನದಿಂದ ಮಾತ್ರ ಜೀವನದಲ್ಲಿ ಆತ್ಮಶಾಂತಿ ಹೊಂದಲು ಸಾಧ್ಯ ಎಂದು ವಾಸುಕೀ ಸುಬ್ರಹ್ಮಣ್ಯ ದೇವಾಲಯದ ಅರ್ಚಕ ವಿದ್ವಾನ್ ಗೋಪಾಲಕೃಷ್ಣ ಸಾಮಗ ಅಭಿಮತ ವ್ಯಕ್ತಪಡಿಸಿದರು.
ಸಗ್ರ್ರಿ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆ ಆಶ್ರಯದಲ್ಲಿ ಮಧ್ವನವಮಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಚಿಂತನಾ ಸಭೆಯಲ್ಲಿ ಮಾತನಾಡಿದರು.
ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ., ವಿದ್ವಾನ್ ಅನಂತ ಸಾಮಗ ಮತ್ತು ಸುಬ್ರಹ್ಮಣ್ಯ ಭಟ್ ಮಾತನಾಡಿದರು.
ಶಶಿಕಾಂತ್ ಭಟ್, ಶ್ರೀವತ್ಸ ಭಟ್, ಸಂದೀಪಕುಮಾರ್ ಕೆ., ನಾಗರಾಜ್, ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಹಾಗೂ ವೇದಿಕೆಯ ಸದಸ್ಯ ಸುರೇಶ್, ಅನುರಾಧಾ, ವಿಜಯಲಕ್ಷ್ಮೀ, ಲಕ್ಷ್ಮೀ, ಶ್ರೀದೇವಿ, ದೀಪಾ, ವೀಣಾ, ಸಚಿನ್, ರಾಘವೇಂದ್ರ, ಗೀತಾ, ಮುರಳೀಧರ್, ಬಸವರಾಜ್, ರಮೇಶ್, ಹೇಮಲತಾ, ಶಿವಾನಿ, ದೀಕ್ಷಾ, ರೇಷ್ಮಾ, ಶಶಿಕಲಾ ಇತರರು ಉಪಸ್ಥಿತರಿದ್ದರು.
ವಿಠ್ಠಲ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ವಿದ್ವಾನ್ ಪ್ರಸಾದ್ ಮಾತನಾಡಿ, ಮಧ್ವಾಚಾರ್ಯರು ವೇದ, ಉಪನಿಷತ್ತುಗಳ ಸಾರವನ್ನು ಸರಳವಾಗಿ ವಿವರಿಸಿದ್ದಾರೆ. ಉಲ್ಲಾಸಮಯವಾದ ಈ ಜಗತ್ತು ದೇವರ ಸೃಷ್ಟಿಯಾಗಿದ್ದು, ನಾವು ಕೆಡಕು ಬಯಸಬಾರದು. ದೇವರಿಗೆ ನಮ್ಮನ್ನು ಸಮರ್ಪಿಸಿಕೊಳ್ಳಬೇಕು. ಮತ್ತೊಬ್ಬರಿಗೆ ಉಪಕಾರ ಮಾಡುವುದೇ ಜೀವನದ ನಿಜಅರ್ಥ. ನಮಗಿಂತ ಹೆಚ್ಚು ತೊಂದರೆಯಲ್ಲಿರುವವರಿಗೆ ಸಹಾಯ ಮಾಡುವುದೇ ಮಾನವ ಧರ್ಮ ಎಂದು ಮಧ್ವಾಚಾರ್ಯರು ಉಪದೇಶದಲ್ಲಿ ತಿಳಿಸಿದ್ದಾರೆ. 12ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದ ಅವರು, ವೇದ ಹಾಗೂ ತತ್ತ್ವ ಜ್ಞಾನ ವಿಸ್ತರಣೆಗಾಗಿ ಜೀವನ ಮುಡುಪಾಗಿಟ್ಟರು. 37ಕ್ಕೂ ಅಧಿಕ ಗ್ರಂಥ ರಚಿಸಿದ್ದರು ಎಂದು ತಿಳಿಸಿದರು.