

ಮಡಿಕೇರಿ; ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವತಿಯಿಂದ ಸಮುದಾಯದ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ "ಸಮುದಾಯದ ಚಿಂತನ ಮಂಥನ" ಕಾರ್ಯಾಗಾರ ಆಯೋಜಿಸಲಾಗಿತ್ತು.
ನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮನ್ನು ಸಮಾಜದ ಹಿರಿಯ ಸ್ಥಾಪಕ ಸದಸ್ಯರಾದ ಅಕ್ಕಮ್ಮ ಮೂರ್ತಿ ಉದ್ಘಾಟಿಸಿದರು. ಸೇವಾ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಗೇರ ಗ್ರಾಮ ವಿಕಾಸ ಯೋಜನೆಯ ಕುರಿತು ಸುರೇಶ ಕಂಬಿಬಾಣೆ ಮಾಹಿತಿ ನೀಡಿದರು. ಸುಳ್ಯದ ನಂದರಾಜ್ ಸಂಕೇಶ್ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಮೊಗೇರ ಸಮುದಾಯದ ಸಂಸ್ಕೃತಿ, ಆಚಾರ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕ, ಕ್ರೀಡೆ, ಆರ್ಥಿಕ ಸಬಲೀಕರಣ, ಶೈಕ್ಷಣಿಕ ಸಂಸ್ಥೆ ನಿರ್ಮಾಣಕ್ಕಾಗಿ ಸರಕಾರಕ್ಕೆ ಸಲ್ಲಿಸಿದ ಜಾಗದ ಬೇಡಿಕೆ, ಜಿಲ್ಲೆಯಲ್ಲಿ ಮೊಗೇರ ಸಮುದಾಯದ ನಿವೇಶನ ಹಾಗೂ ವಸತಿ ರಹಿತರ ಬೇಡಿಕೆ ಕುರಿತು ಚರ್ಚಿಸಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
:ನೂತನ ಸಮಿತಿ ರಚನೆ: ಮೊಗೇರ ಸಮಾಜದ ನೂತನ ಮಡಿಕೇರಿ ತಾಲೂಕು ಸಮಿತಿ ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಪಿ.ಕೆ.ದಿನೇಶ್ ಉಡೋತ್ ನೇಮಕ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಎಸ್.ರಾಮ, ಖಜಾಂಚಿಯಾಗಿ ವಿಶ್ವನಾಥ್, ಉಪಾಧ್ಯಕ್ಷರಾಗಿ ಉಮೇಶ್ ಮಕ್ಕಂದೂರು, ಗೌರವ ಅಧ್ಯಕ್ಷರಾಗಿ ಪಿ.ಬಿ.ಸುರೇಶ್ ನೇಮಕಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಧನ್ಯ ಮೂರ್ನಾಡು, ಶ್ರೀನಿವಾಸ್ ಮೇಕೇರಿ, ಜನಾರ್ಧನ್ ಕಗ್ಗೋಡ್ಲು, ಚಂದ್ರ ಬೋಯಿಕೇರಿ, ಮಹೇಶ್ ಮೂರ್ನಾಡು, ಮಣಿ ಮೇಕೇರಿ, ಸತೀಶ್ ಮದೆನಾಡು ಹಾಗೂ ಚೇತನ್ ಮೊಣ್ಣಂಗೇರಿ ಆಯ್ಕೆಯಾದರು.