

ಚಿಂತಾಮಣಿ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ವಿ.ಗೋಪಾಲ್ಗೌಡ ಅವರ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿಂತಾಮಣಿ ಹೊರವಲಯದ ಬೆಂಗಳೂರು ರಸ್ತೆಯಲ್ಲಿರುವ ಚಿನ್ನಸಂದ್ರ ಗ್ರಾಮದಲ್ಲಿ ಅ.6ರಂದು ಆಯೋಜಿಸಿರುವ ವೇದಿಕೆ ಕಾರ್ಯಕ್ರಮಕ್ಕೆ ತೆಲುಗಿನ ಖ್ಯಾತ ನಟ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಗಮನದ ಹಿನ್ನೆಲೆ ಭಾರೀ ಭದ್ರರತೆ ಕೈಗೊಳ್ಳಲಾಗಿದೆ.
ಬಂದೋಬಸ್ತ್ಗಾಗಿ 1500 ಪೊಲೀಸರನ್ನು ನಿಯೋಜಿಸಲಾಗಿದೆ.
ರಾಜ್ಯ ಹಾಗೂ ನೆರೆಯ ಆಂದ್ರಪ್ರದೇಶದಿಂದ ಒಂದು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಆಗಮಿಸಲಿದ್ದು, 30 ಸಾವಿರ ಪಾಸ್ ವಿತರಿಸಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ನೂಕು ನುಗ್ಗಲು ತಪ್ಪಿಸಲು 30 ಸಾವಿರ ಪಾಸ್ಗಳನ್ನು ವಿತರಿಸಲಾಗಿದ್ದು, ಪಾಸ್ವುಳ್ಳವರಿಗೆ ಮಾತ್ರ ಪ್ರವೇಶ ಎಂಬ ಕೂಗು ಕೇಳುತ್ತಿದ್ದಂತೆ, ಅದೇ ಮಾದರಿಯಲ್ಲಿ ಪಾಸ್ಗಳನ್ನು ನಕಲಿ ಮಾಡಿ ಹಂಚಿಕೆ ಮಾಡಿರುವುದು ಗೊತ್ತಾಗಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಸ್ಥಳಿಯ ಮಾಜಿ ಶಾಸಕರು, ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ.