ಕೊಲ್ಲುವ ಸಂಸ್ಕೃತಿಗೆ ಚಿಣ್ಣರ ಧಿಕ್ಕಾರ

Chinna's contempt for the culture of killing
ವಿಜಯಪುರ ತಾಲೂಕಿನ ಕನ್ನೂರಿನಲ್ಲಿರುವ ಶಾಂತಿಕುಟೀರದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳು ಮೋಂಬತ್ತಿಯನ್ನು ಬೆಳಗಿಸಿ ಕಾಶ್ಮೀರದ ಪಹಲ್ಗಾವ್‌ನಲ್ಲಿ ಗುಂಡಿಗೆ ಬಲಿಯಾದ ಅಮಾಯಕ ಪ್ರವಾಸಿಗರ ಆತ್ಮಕ್ಕೆ ಶಾಂತಿಕೋರಿದರು.
Published on

ವಿಜಯಪುರ : ಕಾಶ್ಮೀರದ ಪಹಲ್ಗಾವ್‌ನಲ್ಲಿ ಉಗ್ರಗಾಮಿಗಳು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಜನರ ಸಾವಿಗೆ ಕಾರಣವಾದ ಘನೋರ ಘಟನೆಯನ್ನು ತೀವ್ರವಾಗಿ ಖಂಡಿಸಿ ತಾಲೂಕಿನ ಕನ್ನೂರಿನ ಶಾಂತಿಕುಟೀರದಲ್ಲಿ ಮೇಣದಬತ್ತಿ ಪ್ರಜ್ವಲಿಸಿ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಶಾಂತಿಕುಟೀರದಲ್ಲಿ ನಡೆಯುತ್ತಿರುವ ಸರ್ಕಾರಿ ಶಾಲೆಯ ಮಕ್ಕಳ ಉಚಿತ ಬೇಸಿಗೆ ಶಿಬಿರದಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಮಕ್ಕಳು ‘ದೇಶ ಕೀ ರಕ್ಷಾ ಕೌನ್ ಕರೆಗಾ? ಹಮ್ ಕರೆಂಗೆ...ಹಮ್ ಕರೆಂಗೆ, ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ, ಈ ದೇಶದ ರಕ್ಷಣೆಯು ಯಾರ ಹೊಣೆ? ನಮ್ಮ ಹೊಣೆ.. ನಮ್ಮ ಹೊಣೆ, ಕಾಶ್ಮೀರದಲ್ಲಿ ಉಗ್ರರ ದಾಳಿಯನ್ನು ಖಂಡಿಸುತ್ತೇವೆ. ಧರ್ಮಾಧಾರಿತ ಕ್ರೂರ ಕೃತ್ಯಗಳು ಅಂತ್ಯಗೊಳ್ಳಲಿ. ‘ಶಾಂತಿ ನಮ್ಮ ಮಂತ್ರ ಪ್ರೀತಿ ನಮ್ಮ ಅಸ’ ಎಂದು ೋಷಣೆ ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದರು. ಜೊತೆಗೆ

ಮಕ್ಕಳು ಸ್ವಯಂ ಪ್ರೇರಣೆಯಿಂದ ‘ಭಯೋತ್ಪಾದನೆ ನಿರ್ಮೂಲನೆಯಲ್ಲಿ ನನ್ನ ಪಾತ್ರ’ ಈ ವಿಷಯ ಕುರಿತಾಗಿ ಪ್ರಬಂಧವನ್ನು ಬರೆದು ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಶಿಬಿರಾಧಿಪತಿ ಹಾಗೂ ರಾಮರಾಜ್ಯ ಕಲಾಮೇಳ, ಶಾಂತಿ ಕುಟೀರ ಕನ್ನೂರಿನ ಅಧ್ಯಕ್ಷರಾದ ಶ್ರೀಕೃಷ್ಣ ಗುರೂಜಿಯವರು ಮಾತನಾಡಿ, ಭಾರತ ನನ್ನ ದೇಶ. ಸಕಲ ಭಾರತೀಯರು ನನ್ನ ಬಾಂಧವರು ಎಂಬ ಮಾತನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿ, ಕ್ರೂರ ಹೀನಾಯ ಕೃತ್ಯವನ್ನು ಪ್ರತಿಭಟಿಸಲು ತಮ್ಮಲ್ಲಿರುವ ಪ್ರತಿಶೋಧದ ಜ್ವಾಲೆಯನ್ನು ಕೈಯಲ್ಲಿ ಮೇಣದ ತ್ತಿ ಪ್ರಜ್ವಲಿಸಿ ಹೊರ ಹಾಕಿದ್ದಾರೆ ಎಂದರು.

ಶ್ರೀ ಸಮರ್ಥ ಸದ್ಗುರು ಗಣಪತರಾವ್ ಮಹಾರಾಜರು ಭಾರತೀಯ ಸುರಾಜ್ಯ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಜಾತಿ, ಧರ್ಮ, ಪಂಗಡ, ಪ್ರಾಂತ್ಯ, ಭಾಷೆಯಂತಹ ಸಂಕುಚಿತ ಧೋರಣೆಗಳಿಗೆ ಕಡಿವಾಣ ಹಾಕುವ ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಲು ಪ್ರಯತ್ನಿಸಿದ್ದರು. ಸದ್ಗುರುಗಳ ಈ ಕಳಕಳಿಯನ್ನು ಮಕ್ಕಳು ಪ್ರತಿನಿಧಿಸಿದ್ದು ಸ್ವಾಗತಾರ್ಹ ಎಂದರು.

ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಶಿಕ್ಷಕರು, ರಾಮರಾಜ್ಯ ಕಲಾಮೇಳದ ಕಾರ್ಯಕರ್ತರು ಹಾಗೂ ಕನ್ನೂರಿನ ಸುತ್ತಮುತ್ತಲಿನ ಸುಮಾರು 515 ಮಕ್ಕಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸಂತಾಪ ಸಭೆಯು ಒಂದು ನಿಮಿಷದ ಮೌನಾಚರಣೆಯೊಂದಿಗೆ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net