ಚಿಣ್ಣರ ಮೇಳ-2024ರ ಮಕ್ಕಳ ನಾಟಕೋತ್ಸವಕ್ಕೆ ಚಾಲನೆ

10
Published on

ಮೈಸೂರು: ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ರಂಗಭೂಮಿ ಅಥವಾ ಪ್ರದರ್ಶನ ಕಲೆಗಳು ಸಹಾಯ ಮಾಡುತ್ತವೆ ಎಂದು ರಂಗಕರ್ಮಿ ಶ್ರೀಧರ್ ಹೆಗ್ಗೋಡು ತಿಳಿಸಿದರು.

ರಂಗಾಯಣದ ‘ಸಮರಸವೇ ಜೀವನ’ ಆಶಯದ ಚಿಣ್ಣರ ಮೇಳ-2024ರ ಮಕ್ಕಳ ನಾಟಕೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಮಕ್ಕಳು ಮುಂದೆಯೂ ಹೀಗೆ ನಾಟಕಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಉತ್ತಮ ಪ್ರಜೆಗಳಾಗಬೇಕು. ಕಳೆದ ಇಪ್ಪತ್ತು ದಿನಗಳ ಶಿಬಿರದ ಮೂರ್ತ ರೂಪವಾಗಿ ಈ ನಾಟಕಗಳು ಮೂಡಿ ಬಂದಿರುವುದು ಸಂತಸದ ಸಂಗತಿ ಎಂದರು.

ರಂಗಕರ್ಮಿ ಮೈಮ್ ರಮೇಶ್ ಮಾತನಾಡಿ, ಚಿಣ್ಣರ ಮೇಳದ ಆರಂಭದ ದಿನಗಳನ್ನು ನೆನೆದರು. ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್. ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಶಿಬಿರದ ಸಂಚಾಲಕಿ ಗೋತಾ ಮೋಂಟಡ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net