ಮಕ್ಕಳ ಕಲಿಕೆಗೆ ಚಿಣ್ಣರ ಹರ್ಷೋತ್ಸವ ಪೂರಕ

21ldh2
Published on

ಲಿಂಗದಹಳ್ಳಿ: ವರ್ಷ ಪೂರ್ತಿ ಕಲಿಕೆಗೆ ಸೀಮಿತವಾಗಿರುವ ವಿದ್ಯಾರ್ಥಿಗಳ ಮನಸ್ಸಿಗೆ ಕೊಂಚ ಬದಲಾವಣೆ ಬರಲು ಶಾಲೆಗಳಲ್ಲಿ ಚಿಣ್ಣರ ಹರ್ಷೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಕೃಷ್ಣಾಪುರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಉಡೇವಾ ಗ್ರಾಪಂ ಉಪಾಧ್ಯಕ್ಷೆ ಸುಜಿತ ಸಂತೋಷ್ ಹೇಳಿದರು.

ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಚಿಣ್ಣರ ಹರ್ಷೋತ್ಸವ ಕಾರ್ಯಕ್ರಮದ ಮಾತನಾಡಿ, ಕೇವಲ ಒಂದು ಕಲ್ಲಿನ ಶಿಲೆಯಂತಿರುವ ವಿದ್ಯಾರ್ಥಿಗಳನ್ನು ತಿದ್ದಿತಿಡಿ ಸುಂದರ ರೂಪ ನೀಡಿ ಉತ್ತಮ ಶಿಲೆಯನ್ನಾಗಿ ಮಾಡುವುದು ಶಿಕ್ಷಕರ ಕರ್ತವ್ಯ. ಇದನ್ನು ಕೇವಲ ಕರ್ತವ್ಯ ಎಂದು ಭಾವಿಸದೇ ಆತ್ಮ ತೃಪ್ತಿಯಿಂದ ನಿಭಾಯಿಸಬೇಕು ಎಂದರು.

ಉಡೇವಾ ಗ್ರಾಪಂ ಸದಸ್ಯ ಟಿ.ಆ್ಯಂಡಿ ಗೌಡ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸದೇ ಉತ್ತಮ ಶಿಕ್ಷಕ ವೃಂದದಿಂದ ಗುಣಮಟ್ಟದ ಶಿಕ್ಷಣ ನೀಡುವ, ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಿಗುವ ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರೊಂದಿಗೆ ಸೇರಿ ಶಾಲೆ ಬಿಟ್ಟ ವಿದ್ಯಾರ್ಥಿಗಳ ಮನವೊಲಿಸಿ ಮತ್ತೆ ಶಾಲೆಗೆ ದಾಖಲಾಗುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಈಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಚಿಣ್ಣರ ಹರ್ಷೋತ್ಸವ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಚಂದ್ರಪ್ಪ, ಶಾಲಾ ಮುಖ್ಯಶಿಕ್ಷಕ ತಿಮ್ಮಪ್ಪ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net