

ಉಪ್ಪಳ: ಚಿಣ್ಣರ ಚಿಲುಮೆ ಸಂಘಟಕ ಸಮಿತಿ ಕಾಸರಗೋಡು ಬಾಕುಡ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಗೌರವಾರ್ಪಣೆ ಡಿ.29ರಂದು ನಡೆಯಲಿದ್ದು , ಇದರ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಕುಡಾಲು ಶ್ರೀ ಕೋಮಾರು ಚಾಮುಂಡಿ ದೈವಸ್ಥಾನದಲ್ಲಿ, ಬಾಕುಡ ಸಮಾಜದ ಹದಿನೆಂಟು ದೈವಸ್ಥಾನದ ಹಿರಿಯರು ಹಾಗೂ ಕಾರ್ನವರ ಒಕ್ಕೂಟದ ಅಧ್ಯಕ್ಷ ಶಂಕರ ಅಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಕೃಷ್ಣ ಅಟ್ಟೆಗೋಳಿ ಆಮಂತ್ರಣ ಬಿಡುಗಡೆಗೊಳಿಸಿದರು. ಸಮಿತಿಯ ಅಧ್ಯಕ್ಷ ವಿಜಯ ಪಂಡಿತ್ ಮಂಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಪದಾಧಿಕಾರಿಗಳಾದ ಗಣೇಶ್, ಭಾಸ್ಕರ, ತೋಮ, ಪ್ರವೀಣ್, ಕೇಶವ, ಉದಯ, ಬಾಕುಡ ಸಮಾಜ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ತುಳಸಿದಾಸ್, ಸುರೇಶ್, ಕುಡಾಲು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಮ, ಪದಾಧಿಕಾರಿಗಳಾದ ಸುರೇಶ್, ರಂಜಿತ್, ರವಿ, ಭಾಸ್ಕರ, ಸುನೀಲ್, ಚಿಣ್ಣರ ಚಿಲುಮೆ ಪದಾಧಿಕಾರಿಗಳಾದ ರಾಜೇಶ್, ಗುರುವ, ಹರೀಶ್, ಪವನ್, ಪ್ರಿಜ್ಜು, ನಿರಂಜನ್, ಉದಯ್ ಕುಮಾರ್, ಚಂದ್ರಹಾಸ ಉಪಸ್ಥಿತರಿದ್ದರು. ಅಶೋಕ್ ಸ್ವಾಗತಿಸಿದರು. ವಿಠಲ್ ನಾರಾಯಣ ಬಂಬ್ರಾಣ ವಂದಿಸಿದರು.