ಮೈಸೂರು: ಮಕ್ಕಳಲ್ಲಿ ರಂಗಭೂಮಿಯ ಆಸಕ್ತಿ ಮೂಡಿಸುವ ಸಲುವಾಗಿ ರಾಜೀವ್‌ನಗರದ ವಿಂಗ್ಸ್ ಥಿಯೇಟರ್ ಗ್ರೂಪ್‌ನಿಂದ ಏ.12ರಿಂದ ಮೇ 5ರ ವರೆಗೆ ‘ಚಿಣ್ಣರ ಬಣ್ಣ’ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
ಸಿದ್ಧಾರ್ಥನಗರದ ಶೀಲಾ ಮಾರ್ಗದಲ್ಲಿರುವ ಶಾಂತಲಾ ವಿದ್ಯಾಪೀಠ ಶಾಲೆಯಲ್ಲಿ ಆಯೋಜಿಸಿರುವ ಶಿಬಿರದಲ್ಲಿ ರಂಗಾಯಣ, ನೀನಾಸಂ, ಎನ್‌ಎಸ್‌ಡಿ ಪದವೀಧರರು ನಡೆಸಿಕೊಡಲಿದ್ದಾರೆ. 5ರಿಂದ 14 ವರ್ಷದ ಮಕ್ಕಳಿಗಾಗಿ ಅಭಿನಯ, ಧ್ವನಿ, ವಾಚನ, ಲಯ, ದೇಹ ಚಲನೆ, ಮೂಕಾಭಿನಯ, ರಂಗ ಸಂಗೀತ, ನೃತ್ಯ ಸೇರಿದಂತೆ ಇನ್ನಿತರ ಪ್ರಕಾರಗಳನ್ನು ತಿಳಿಸಿಕೊಡಲಾಗುವುದು. ಸಮಾರೋಪದಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ಇರಲಿದ್ದು, ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಆಸಕ್ತರು ಮೊ: 8904630379 ಸಂಪರ್ಕಿಸುವಂತೆ ಶಿಬಿರದ ನಿರ್ದೇಶಕಿ ಪಿ.ಚಾಂದಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.