

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ರಂಗಾಯಣವು ಚಿಣ್ಣರ ಮೇಳ- 2025ರ ಅಂಗವಾಗಿ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರವನ್ನು ಏ. 10ರಿಂದ ಮೇ 4ರವರೆಗೆ ಆಯೋಜಿಸಿದೆ. ಏ. 9ಕ್ಕೆ 7 ವರ್ಷ ಪೂರ್ಣಗೊಂಡ 15 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. ಆಸಕ್ತರು ರಂಗಾಯಣ ಕಚೇರಿಯಲ್ಲಿ ಅರ್ಜಿ ಪಡೆದು ಏ. 9ರೊಳಗೆ ಪಾಲಕರು ಖುದ್ದಾಗಿ ಮಗುವಿನೊಂದಿಗೆ ಭೇಟಿ ನೀಡಿ ಹೆಸರು ನೋಂದಾಯಿಸಬೇಕು. ಮಾಹಿತಿಗೆ ರಂಗಾಯಣ ಕಚೇರಿ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.