ಚಿನ್ನಾಪುರದಲ್ಲಿ ಚಿರತೆ ಸೆರೆಗೆ ಬೋನು ಅಳವಡಿಕೆ

Kampli Leoprad
ಚಿರತೆ ಸೆರೆಗಾಗಿ ಚಿನ್ನಾಪುರ ಗ್ರಾಮದಲ್ಲಿ ಬೋನು ಅಳವಡಿಸಿರುವುದು.
Published on

ಕಂಪ್ಲಿ: ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತ ಕೃಷ್ಣಮೂರ್ತಿ ಎಂಬುವರ ಹೊಲದಲ್ಲಿ ಸೋಮವಾರ ಸಂಜೆ ಬೋನು ಅಳವಡಿಸಲಾಯಿತು.

ಚಿನ್ನಾಪುರದ ತಾಯಮ್ಮ ಗುಡಿ ಬಳಿಯ ಅಂಜಿನಪ್ಪ ಅವರ ಕುರಿಮಂದೆ ಮೇಲೆ ಭಾನುವಾರ ರಾತ್ರಿ ಚಿರತೆ ದಾಳಿ ಮಾಡಿ ಕುರಿಯನ್ನು ಸಾಯಿಸಿದೆ. ವಿಷಯ ತಿಳಿದು ಮೆಟ್ರಿಯ ಕಿರಿಯ ಪಶು ವೈದ್ಯ ಪರೀಕ್ಷಕ ಕೆ.ಮಂಜುನಾಥ ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ತಿಂಗಳು 9ರಂದು ಚಿರತೆ ದಾಳಿ ಮಾಡಿ ಮೇಕೆಯನ್ನು ಕೊಂದಿತ್ತು. ಗ್ರಾಮಸ್ಥರು ಚಿರತೆ ಸೆರೆಗೆ ಬೋನು ಅಳವಡಿಸುವಂತೆ ಒತ್ತಾಯಿಸಿದ್ದರು. ಇದೀಗ ಮತ್ತೆ ಅದೇ ಸ್ಥಳದಲ್ಲಿ ಚಿರತೆ ದಾಳಿ ಮಾಡಿದ್ದರಿಂದ ಅರಣ್ಯ ಇಲಾಖೆ ಬೋನು ಅಳವಡಿಸಿದ್ದು, ಅದರಲ್ಲಿ ನಾಯಿ ಮರಿಯನ್ನು ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net