ಮಕ್ಕಳಲ್ಲಿ ವ್ಯವಹಾರ ಜ್ಞಾನ ವೃದ್ಧಿಸುವ ಚಿಣ್ಣರ ಸಂತೆ

18 nrp 4
Published on

ಎನ್.ಆರ್.ಪುರ: ಮಕ್ಕಳ ಸಂತೆ ನಡೆಸುವುದರಿಂದ ಮಕ್ಕಳಲ್ಲಿ ವ್ಯವಹಾರದ ಜ್ಞಾನ ಬೆಳೆಯಲಿದೆ ಎಂದು ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಆರ್.ವೆಂಕಟರಮಣಯ್ಯ ಹೇಳಿದರು.

ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿಣ್ಣರ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ವರ್ಷದಂತೆ ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಚಿಣ್ಣರ ಸಂತೆ ನಡೆಸಲಾಗುತ್ತಿದೆ. ಸಾರ್ವಜನಿಕರು ಆಗಮಿಸಿ ವ್ಯಾಪಾರ ಸಹ ಮಾಡುತ್ತಾರೆ ಎಂದರು.

ಮುಖ್ಯಶಿಕ್ಷಕಿ ಸುಧಾ ಮಾತನಾಡಿ, ಮಕ್ಕಳಿಗೆ ವ್ಯವಹಾರ ಕೌಶಲ್ಯಬೆಳೆಸುವ ದೃಷ್ಠಿಯಿಂದ ಚಿಣ್ಣರ ಸಂತೆ ನಡೆಸಲಾಗುತ್ತಿದೆ. ಚಿಣ್ಣರ ಸಂತೆಯಲ್ಲಿ ಮನೆಯಲ್ಲಿ ಬೆಳೆದ ವಸ್ತುಗಳನ್ನು ಶಾಲೆಗೆ ತಂದು ಮಾರಾಟ ಮಾಡುತ್ತಾರೆ. ಸಾರ್ವಜನಿಕರು ವಸ್ತುಗಳನ್ನು ಖರೀದಿ ಮಾಡಿ ಮಕ್ಕಳಿಗೆ ಉತ್ತೇಜನ ನೀಡಬೇಕು ಎಂದರು.

ಮಕ್ಕಳು ಮನೆಯಲ್ಲೇ ಬೆಳೆದ ಸೊಪ್ಪು, ಬದನೆ ಕಾಯಿ, ದುಡ್ಲೆ ಹಣ್ಣು, ನುಗ್ಗಿ ಸೊಪ್ಪು, ಬಾಳೆಹಣ್ಣು, ಹರಿವೆ ಸೊಪ್ಪು, ಬಸಲೆ ಸೊಪ್ಪು, ತೆಂಗಿನಕಾಯಿ, ಸೌತೆ ಕಾಯಿ, ಪಪ್ಪಾಯಿ, ತಿಂಡಿ ತಿನಿಸುಗಳನ್ನು ತಂದು ಮಾರಾಟ ಮಾಡಿದರು. ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆಯ ಎಸ್‌ಡಿಎಂಸಿ ಸದಸ್ಯರಾದ ಎಚ್.ಇ.ಮಹೇಶ್, ಎಚ್.ಎಲ್.ಸದಾಶಿವ, ಶಾಲಾ ಸಹ ಶಿಕ್ಷಕರಾದ ಅನಂತ ಪದ್ಮನಾಭ, ದಯಾನಂದ, ಮಂಜುನಾಥ, ಅತಿಥಿ ಶಿಕ್ಷಕರಾದ ಕಾವ್ಯ, ಶ್ರೀಲತಾ, ಅರ್ಚನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net