ಏ.12ರಿಂದ ರಂಗಾಯಣದಲ್ಲಿ ಚಿಣ್ಣರ ಮೇಳ

mysore
Published on

ಮೈಸೂರು: ಮೈಸೂರು ರಂಗಾಯಣವು ‘ಸಮರಸವೇ ಜೀವನ’ ಎಂಬ ಆಶಯದಡಿ 21ನೇ ವರ್ಷದ ಚಿಣ್ಣರಮೇಳವನ್ನು ಏ.12ರಿಂದ ಮೇ 7 ರವರೆಗೆ ರಂಗಾಯಣದ ಆವರಣದಲ್ಲಿ ನಡೆಸಲು ಯೋಜಿಸಲಾಗಿದೆ.


ಏ.2 ರಂದು ಬೆಳಗ್ಗೆ 10 ಗಂಟೆಗೆ ರಂಗಾಯಣದ ಕಚೇರಿಯಲ್ಲಿ ಅರ್ಜಿ ವಿತರಿಸಲಾಗುವುದು. ಅರ್ಜಿಯ ಶುಲ್ಕ 100 ರೂ. ಆಗಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಏ.5ರಂದು ಸಂಜೆ 5 ಗಂಟೆಯೊಳಗೆ ರಂಗಾಯಣದ ಕಚೇರಿಗೆ ಸಲ್ಲಿಸಬೇಕು.


ಶಿಬಿರದ ಪ್ರವೇಶ ಶುಲ್ಕ ಮಗುವೊಂದಕ್ಕೆ 3 ಸಾವಿರ ರೂ. ಮೊತ್ತವನ್ನು ರಂಗಾಯಣದ ಉಪನಿರ್ದೇಶಕರ ಹೆಸರಿಗೆ ಡಿ.ಡಿ ತೆಗೆದು ಅರ್ಜಿಯೊಂದಿಗೆ ಲಗತ್ತಿಸಬೇಕು ಎಂದು ರಂಗಾಯಣದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net