ಚಿಂಚೋಳಿ; ಮಾಸಾಶನ ನೀಡದ ಪೋಸ್ಟ್ ಮಾಸ್ಟರ್ ವಿರುದ್ಧ ತಹಸೀಲ್ದಾರ್ ಕಿಡಿ

PH 02
Published on

ಚಿಂಚೋಳಿ: ವೃದ್ಧರಿಗೆ ಸಮರ್ಪಕ ಮಾಸಾಶನ ನೀಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಪೋಸ್ಟ್​ ಮಾಸ್ಟರ್​ ವಿರುದ್ಧ ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಜರುಗಿದೆ.

ಪಟ್ಟಣದ ಅಂಚೆ ಕಚೇರಿಗೆ ದಿಢೀರ್ ಭೇಟಿ ನೀಡಿದ ತಹಸೀಲ್ದಾರ್​, ವಯಸ್ಕರ, ವಿದವೆ, ವಿಕಲಚೇತನರ ಮಾಸಾಶನ ನೀಡುವಲ್ಲಿ ಜನ ಸಾಮಾನ್ಯರಿಗೆ ಅಲೆದಾಡಿಸುತ್ತಿರುವುದು ನಿಲ್ಲಿಸಬೇಕು. ತಾಲೂಕಿನಲ್ಲಿ 1160 ಫಲಾನುಭವಿಗಳಿಗೆ ವೃದ್ಧಾಪ ವೇತನ ಕೂಡಲೇ ವಿತರಿಸಬೇಕು. ಜನ ಸಾಮಾನ್ಯರ ತೊಂದರೆ ನಿವಾರಿಸದಿದ್ದರೇ ಸರ್ಕಾರಿ ಸೇವೆ ನಿಷ್ಕಾಳಜಿ ಅಡಿ 353 ಕಾಯ್ದೆ ಅಸ್ತ್ರ ಪ್ರಯೋಗಕ್ಕೆ ಅವಕಾಶ ನೀಡಬೇಡಿ ಎಂದು ಪೋಸ್ಟ್ ಮಾಸ್ಟರ್ ಸಚಿನ್ ಪಾಟೀಲ್ ಗೆ ಎಚ್ಚರಿಕೆ ನೀಡಿದರು.

ತಾ.ಪಂ ಇಒ ಶಂಕರ ರಾಠೋಡ, ಪಿಎಸ್ಐ ಹಣಮಂತಪ್ಪ ಬಂಕಲಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net