ಚಿಂಚೋಳಿ: ಭುವನೇಶ್ವರಿ ಮಾತೆಗೆ ಗೌರವ ನೀಡೋಣ

PH 09
Published on

ಚಿಂಚೋಳಿ: ಭವ್ಯ ಪರಂಪರೆ ಹೊಂದಿರುವ ನಾಡಿನಲ್ಲಿ ಬದುಕುತ್ತಿರುವ ನಾವೆಲ್ಲರೂ ಪುಣ್ಯವಂತರು. ತಾಯಿ ಭುವನೇಶ್ವರಿ ದೇವಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.

ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆ, ನೆಲ-ಜಲ, ಸಂಸ್ಕೃತಿ ಉಳಿಸಿ ಬೆಳೆಸೋಣ. ಕನ್ನಡದ ಮನಸ್ಸುಗಳು ಒಗ್ಗೂಡಿಸಿ, ಭುವನೇಶ್ವರಿಯ ಸೇವೆ ಮಾಡೋಣ ಎಂದರು.

ತಾಪಂ ಇಒ ಶಂಕರ ರಾಠೋಡ್, ಬಿಇಒ ಹನುಮಂತ ರಾಠೋಡ್, ಪುರಸಭೆ ಮುಖ್ಯಾಧಿಕಾರಿ ಕಾಶೀನಾಥ ಧನ್ನಿ, ಪ್ರಮುಖರಾದ ಗುರುಪ್ರಸಾದ ಕವಿತಾಳ, ಪ್ರಭುಲಿಂಗ, ವೆಂಕಟೇಶ ದುಗ್ಗನ್, ಕೇಶವ ಕುಲಕರ್ಣಿ, ಸುಭಾಷ ಸುಲೇಪೇಟ, ಸುರೇಶ ದೇಶಪಾಂಡೆ, ವಿಠ್ಠಲ್ ಕುಸಾಳೆ, ಶ್ರೀಕಾಂತ ಜಾನಕಿ, ಬಸವರಾಜ ವಾಡಿ, ಉಲ್ಲಾಸಕುಮಾರ ಕೇರಳ್ಳಿ, ಶಿವಕುಮಾರ ಪೋಚಾಲಿ, ಸಚಿನ ರಾಠೋಡ್, ರೇವಣಸಿದ್ದ ಮೋಘಾ, ಅಶೋಕ ಹೂವಿನಬಾವಿ ಇತರರಿದ್ದರು. ಕನ್ನಡದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net