ಚಿಂಚೋಳಿ ಗುರುಗಂಗಾಧರ ಶ್ರೀಗಳ ಪಲ್ಲಕ್ಕಿ ವೈಭವ

PH 14
Published on

ಚಿಂಚೋಳಿ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರಾಧ್ಯ ದೈವ, ಪವಾಡ ಪುರುಷ ಶ್ರೀ ಸದ್ಗುರು ಗುರು ಗಂಗಾಧರ ಸ್ವಾಮಿಗಳ ಪಲ್ಲಕ್ಕಿ ಮಹೋತ್ಸವ ಸೋಮವಾರ ಸಂಭ್ರಮದಿAದ ನಡೆಯಿತು.

ಶ್ರೀ ಮಹಾಂತೇಶ್ವರ ಮಠದಲ್ಲಿ ತಿಂಗಳ ಪರ್ಯಂತ ಭಜನಾ ಆಯೋಜಿಸಿದ್ದು, ಸೋಮವಾರ ಮಂಗಲಗೊAಡಿತು. ಬೆಳಗ್ಗೆ ಸದ್ಗುರು ಶ್ರೀ ಗುರುಗಂಗಾಧರ ಸ್ವಾಮೀಜಿ, ಶ್ರೀ ಮಹಾಂತೇಶ್ವರ ಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ಜರುಗಿದವು. ಚವದಾಪುರದ ಶ್ರೀ ವೀರಮಹಾಂತೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಸಂಜೆ ಶ್ರೀಮಠದ ಭಕ್ತಗಣ ಸದ್ಗುರುವಿನ ಪಲ್ಲಕ್ಕಿ ಉತ್ಸವವನ್ನು ಭಕ್ತಿಯಿಂದ ನೆರವೇರಿಸಿದರು. ಭಜನೆ, ಪುರವಂತರ ಸೇವೆ ಗಮನಸೆಳೆದವು. ರಸ್ತೆಯುದ್ದಕ್ಕೂ ಅಪಾರ ಭಕ್ತರು ಗುರುವಿನ ಪಲ್ಲಕ್ಕಿಯ ದರ್ಶನ ಪಡೆದು ಪುನೀತರಾದರು. ಪ್ರಮುಖರಾದ ಶಾಂತವೀರ ಸುಂಕದ, ಸಂಗಪ್ಪ ಪಾಲಮೂರ, ನಾಗರಾಜ ಮಲಕೂಡ, ಎಸ್.ಬಬಲಾದಿ, ಮಹಾಂತಯ್ಯ ಮಠಪತಿ, ರತ್ನಾಕರಯ್ಯ, ಶರಣಪ್ಪ ಹಲಚೇರಿ, ಕಿಶೋರ ನಾಯಿನೂರ, ಶಶಿಧರ ಯಲಾಲ್, ಬಸವರಾಜ ಸುಂಕದ, ಬಕ್ಕಪ್ರಭು, ನಾಗಶೆಟ್ಟಿ ಭದ್ರಶೆಟ್ಟಿ, ವಾಸಂತಿ ಇಟಗಿ, ಶಿವಕುಮಾರ ಪೋಚಾಲಿ, ಮೊಗಲಪ್ಪ ಕಟಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net