ಚಿಂಚೋಳಿ: ಪಕ್ಷಬೇಧ ಮರೆತು ಅಭಿವೃದ್ಧಿಗೆ ಶ್ರಮಿಸೋಣ- ಡಾ.ಜಾಧವ್​

PH 01
Published on

ಚಿಂಚೋಳಿ: ಕ್ಷೇತ್ರದಲ್ಲಿ ಪಕ್ಷಗಳು ಚುನಾವಣೆಗೆ ಸೀಮಿತ ಅಭಿವೃದ್ಧಿಗೆ ಒಗ್ಗೂಡಿ ಶ್ರಮಿಸೋಣ ಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು.

ಪಟ್ಟಣದ ಚಂದಾಪೂರದಲ್ಲಿ ಪುರಸಭೆ ವತಿಯಿಂದ 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ 82 ಲಕ್ಷ ಅನುದಾನ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿ ಗುಣಮಟ್ಟದಿಂದ ಪಡೆಯಬೇಕು. ಸಮಯ ಪಾಲನೆ ಅನುಸರಿಸಬೇಕು. ಈ ಹಿಂದೆ ಕೈಗೆತ್ತಿಕೊಂಡ ಹಲವಾರು ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳಿಸಲು ಮುಂದಾಗಬೇಕು. ಕ್ಷೇತ್ರದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ಕೊರತೆಯಿಂದ ಅಭಿವೃದ್ಧಿ ಹಿನ್ನಡೆಯಾಗುತ್ತಿದ್ದು, ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ನುಡಿದರು.

ಅದೇ ರೀತಿ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಟೈಗರ್, ಅಬ್ದುಲ್ ಬಾಸೀದ, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ್ ಧನ್ನಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸುಶೀಲ ಬೋಮ್ಮನಳ್ಳಿ, ನಾಗೇಂದ್ರಪ್ಪ ಗುರಂಪಳ್ಳಿ, ಅನ್ವರ್ ಖತೀಬ್, ಬಸವರಾಜ ಶಿರಸಿ, ಅಹ್ಮದ್ ಶಬ್ಬೀರ್, ರಾಧಾಬಾಯಿ ಓಲಗೇರಿ, ಸೈಯದ್ ಖಲೀಲ್, ಸುಭಾಷ್ ಸೀಳಿನ, ಸಂತೋಷ ಗಡಂತಿ, ಶಿವಕುಮಾರ ಪೋಚಾಲಿ, ಭೀಮಶೇಟ್ಟಿ ಮುರುಡಾ, ಅಮರ ಲೋಡ್ಡನೂರ, ರವಿಕಾಂತ ಹೊಸಬಾಯಿ,ರಾಮರಾವ ಪಾಟೀಲ್ ‌ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net