ವಕೀಲೆ ಬಂಧನ ಖಂಡಿಸಿ ಚಿಂಚೋಳಿಯಲ್ಲಿ ನ್ಯಾಯವಾದಿಗಳಿಂದ ಪ್ರತಿಭಟನೆ

PH 05
Published on

ಚಿಂಚೋಳಿ: ಭಾಲ್ಕಿ ತಾಲೂಕಿನ ವಕೀಲರ ಸಂಘದ ಸದಸ್ಯೆ, ನ್ಯಾಯವಾದಿ ಧನಲಕ್ಷ್ಮೀ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿರುವುದನ್ನು ಖಂಡಿಸಿ ಪಟ್ಟಣದ ಬಸ್ ನಿಲ್ದಾಣದ ಮುಂದೆ ಹೆದ್ದಾರಿಯಲ್ಲಿ ಸಂಚಾರ ತಡೆದು ತಾಲೂಕು ವಕೀಲರ ಸಂಘವು ಗುರುವಾರ ಬೃಹತ್ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಶ್ರಿಮಂತ ಕಟ್ಟಿಮನಿ, ಸುದರ್ಶನ ಪಾಟೀಲ್, ಮಾಣಿಕರಾವ ಗುಲಗುಂಜಿ, ನೀಲಮ್ಮ, ಜಗನ್ನಾಥ ಗಂಜಗೇರಾ ಮಾತನಾಡಿ, ಕೂಡಲೇ ಮಹಿಳಾ ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅಮಾನುಷವಾಗಿ ವರ್ತಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಸೇವೆಯಿಂದ ವಜಾಮಾಡಿ ಕ್ರಿಮಿನಲ್ ದಾವೆ ಹೂಡಬೇಕು. ನ್ಯಾಯವಾದಿಗಳ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂಬ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಿದರು.

ಈ ಹೋರಾಟದಲ್ಲಿ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಸುದರ್ಶನ ಬಿರಾದಾರ, ಜಿ.ಕೆ.ಗೋಖಲೆ, ಜಗನ್ನಾಥ ಗಂಜಗೇರಾ, ಸುದರ್ಶನ ಸಂತಾಲ, ಪ್ರವೀಣ ನಮಲಿಕರ್, ರಾಜೇಂದ್ರ ವರ್ಮಾ, ನಾಗವೇಣಿ ಕಳಸ್ಕರ್, ಹಣಮಂತ ಹಿರೇಮನಿ, ದೀಪಿಕಾ ಪಾಟೀಲ್, ಸುರೇಖಾ ಪಾಟೀಲ್, ಚಂದ್ರಶೇಟ್ಟಿ ಜಾಧವ್, ಉಮೇಶ ಪಾಟೀಲ್, ವಿಜಯಕುಮಾರ, ನೀಲಮ್ಮ, ವೈಜನಾಥ ದಾದಿ, ಮಲ್ಲಿಕಾರ್ಜುನ ಹಲಚೇರಾ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net