ಚಿಂಚಲಿ ಮಾಯಕ್ಕಾದೇವಿ ಜಾತ್ರೆ

7CNC1-
ಮಾಯಕ್ಕಾ ದೇವಿ ಜಾತ್ರೆ ಹಿನ್ನೆಲೆ ವಿವಿಧ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ನಿರತರಾಗಿರುವ ವ್ಯಾಪಾರಸ್ಥರು.
Published on

ಚಿಂಚಲಿ: ಇಲ್ಲಿನ ಮಾಯಕ್ಕಾದೇವಿ ಜಾತ್ರೆ ಫೆ. 8ರಿಂದ 18ರ ವರೆಗೆ ನಡೆಯಲಿದೆ. ಫೆ. 12ರಂದು ಮಾಯಕ್ಕಾದೇವಿಗೆ ಮಹಾನೈವೇದ್ಯ ಮತ್ತು ಪಲ್ಲಕ್ಕಿ ಉತ್ಸವ ಜರುಗಲಿದೆ. ನಿತ್ಯ ವಿಶೇಷ ಪೂಜೆ ನೆರವೇರಲಿದೆ. ಜಾನುವಾರು ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ. ಜಾತ್ರೆಗೆ ಬರುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸಲಾಗಿದೆ. ‘ಹಾಲಹಳ್ಳದಲ್ಲಿ ಭಕ್ತರಿಗೆ ಸ್ನಾನದ ಅನುಕೂಲಕ್ಕಾಗಿ ಘಟಪ್ರಭಾ ಎಡದಂಡೆ ಕಾಲುವೆಯಿಂದ 200 ಕ್ಯೂಸೆಕ್ ನೀರು ಬಿಡಲಾಗಿದೆ. ಶನಿವಾರ ಮಧ್ಯಾಹ್ನದ ಒಳಗೆ ನೀರು ತಲುಪಬಹುದು’ ಎಂದು ರಾಯಬಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಎಚ್.ಎಲ್. ಪೂಜಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net