ಚೀನಾ ವಸ್ತುಗಳನ್ನು ಬಹಿಷ್ಕರಿಸಿ

01
Published on

ಮಾಂಜರಿ: ಚೀನಾ ಅಟ್ಟಹಾಸದ ವಿರುದ್ಧ ಎಲ್ಲ ಭಾರತೀಯರೂ ನಿಂತಿದ್ದಾರೆ. ಭಾರತೀಯ ಸೈನಿಕರ ಜತೆ ನಿಲ್ಲುವ ಸಮಯ ಬಂದಿದೆ. ಚೀನಾ ಉತ್ಪಾದಿಸುವ ವಸ್ತುಗಳನ್ನು ಬಹಿಷ್ಕರಿಸಿ, ಚೀನಾ ಕುತಂತ್ರಕ್ಕೆ ಬಲಿಯಾದ ಸೈನಿಕರಿಗೆ ಗೌರವ ಸಲ್ಲಿಸೋಣ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಹೇಳಿದರು.

ಯಡೂರ ಗ್ರಾಮದಲ್ಲಿ ಶಿವತೇಜ ಫೌಂಡೇಷನ್ ಲಕ್ಷ್ಮಣ ಸೂರ್ಯವಂಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ರೂಪಿಕಾ ಕ್ರೆಡಿಟ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹುತಾತ್ಮಾ ಯೋಧರಿಗೆ ಶ್ರದ್ಧಾಂಜಲಿ ಹಾಗೂ ಚೀನಾ ಉತ್ಪಾದಿತ ವಸ್ತುಗಳ ಬಹಿಷ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಚೀನಾ ಭಾರತದ ಮಗ್ಗುಲ ಮುಳ್ಳಾಗಿ ಕಾಡುತ್ತಲೇ ಇದೆ.

ಆಗಾಗ ಗಡಿತಂಟೆ ಮಾಡುತ್ತಿದ್ದರೂ, ಇದೇ ಮೊದಲ ಬಾರಿಗೆ ಭಾರತೀಯ ಸೈನಿಕರ ಮೇಲೆ ಕುತಂತ್ರದಿಂದ ಉಗ್ರ ದಾಳಿ ಮಾಡಿದೆ. ಆದ್ದರಿಂದ ದೇಶವಾಸಿಗಳು ಚೀನಾ ಉತ್ಪಾದಿತ ವಸ್ತುಗಳನ್ನು ಬಹಿಷ್ಕರಿಸಿ ಸೈನಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.

ಬವಜ್ಯೋತಿ ಯುಥ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಅಜಯ ಸೂರ್ಯವಂಶಿ, ಅಮರ ಬೋರಗಾಂವೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net