

ಬೆಂಗಳೂರು: ನಮ್ಮ ಮೆಟ್ರೋ ಯೋಜನೆಯ 2ನೇ ಹಂತಕ್ಕಾಗಿ ಅಗತ್ಯವಿರುವ ಒಟ್ಟು ಬೋಗಿಗಳ ಪೈಕಿ 216 ಬೋಗಿಗಳ ಪೂರೈಕೆಗೆ ಚೀನಾ ಮೂಲದ ಸಂಸ್ಥೆಗೆ ಗುತ್ತಿಗೆ ನೀಡಲು ಬಿಎಂಆರ್ಸಿಎಲ್ ನಿರ್ಧರಿಸಿದೆ.
ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ಮೆಟ್ರೋ ಯೋಜನೆ ವಿಸ್ತರಣೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 42 ಕಿ.ಮೀ. ಉದ್ದದ ಮಾರ್ಗ ನಿರ್ವಿುಸಿ ರೈಲು ಸಂಚಾರ ಆರಂಭಿಸಲಾಗಿದೆ. ಜತೆಗೆ ಇದೀಗ ಎರಡನೇ ಹಂತದಲ್ಲಿ ಒಟ್ಟು 4 ಮಾರ್ಗಗಳಲ್ಲಿ 72 ಕಿ.ಮೀ. ಉದ್ದದ ಮಾರ್ಗವನ್ನು ವಿಸ್ತರಿಸಲಾಗುತ್ತಿದೆ. ಆ ಮಾರ್ಗಗಳ ಪೈಕಿ ಯಲಚೇನಹಳ್ಳಿ-ಅಂಜನಾಪುರ ಟೌನ್ ನಡುವಿನ ವಿಸõತ ಮಾರ್ಗದಲ್ಲಿ ಆಗಸ್ಟ್ನಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಅದಕ್ಕೆ ಅಗತ್ಯವಾದ ಬೋಗಿಗಳ ಪೂರೈಕೆಗೆ ಗುತ್ತಿಗೆ ನೀಡಲು ಬಿಎಂಆರ್ಸಿಎಲ್ ಮುಂದಾಗಿದೆ.
2ನೇ ಹಂತಕ್ಕೆ ಅಗತ್ಯವಿರುವ ಒಟ್ಟು ಬೋಗಿಗಳ ಪೈಕಿ 216 ಬೋಗಿಗಳ ಪೂರೈಕೆಗಾಗಿ ಚೀನಾ ಮೂಲದ ಸಿಆರ್ಆರ್ಸಿ ಕಾಪೋರೇಷನ್ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಒಟ್ಟು 235 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ.
ಆಂಧ್ರಪ್ರದೇಶದಲ್ಲಿ ನಿರ್ಮಾಣ: ಸಿಆರ್ಆರ್ಸಿ ಕಾರ್ಪೋರೇಷನ್ ಆಂಧ್ರಪ್ರದೇಶದ ಶ್ರೀ ಸಿಟಿಯಲ್ಲಿ ಬೋಗಿ ನಿರ್ಮಾಣ ಘಟಕ ಸ್ಥಾಪಿಸುತ್ತಿದೆ. ಬಿಎಂಆರ್ಸಿಎಲ್ ಜತೆ ಒಪ್ಪಂದ ಏರ್ಪಟ್ಟ ನಂತರದಲ್ಲಿ 216 ಬೋಗಿಗಳ ಪೈಕಿ 204 ಬೋಗಿಗಳನ್ನು ಈ ಘಟಕದಲ್ಲೇ ನಿರ್ವಿುಸಲಾಗುತ್ತದೆ. ಇತರ 12 ಬೋಗಿಗಳನ್ನು ಚೀನಾದಲ್ಲಿ ನಿರ್ವಿುಸಿ ನೀಡಲಾಗುತ್ತದೆ.
ನಮ್ಮ ಮೆಟ್ರೋ ಎರಡನೇ ಹಂತದ 7 ಮಾರ್ಗಗಳ ಪೈಕಿ 4 ಮಾರ್ಗಗಳು ಮೊದಲನೇ ಹಂತದಲ್ಲಿ ನಿರ್ವಣಗೊಂಡಿರುವ ಮಾರ್ಗಗಳ ವಿಸ್ತರಣಾ ಮಾರ್ಗಗಳಾಗಿವೆ. ಇವುಗಳ ಪೈಕಿ ಯಲಚೇನಹಳ್ಳಿ-ಅಂಜನಾಪುರ ಟೌನ್ಶಿಪ್ ಮಾರ್ಗದಲ್ಲಿ ಆಗಸ್ಟ್ನಿಂದ ಹಾಗೂ ನಾಯಂಡಹಳ್ಳಿ-ಕೆಂಗೇರಿ ಮಾರ್ಗದಲ್ಲಿ ಅಕ್ಟೋಬರ್ನಿಂದ ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ನಾಗಸಂದ್ರ-ಬಿಐಇಸಿ ಹಾಗೂ ಬೈಯಪ್ಪನಹಳ್ಳಿ- ವೈಟ್ಫೀಲ್ಡ್ ನಡುವಿನ ವಿಸ್ತೃತ ಮಾರ್ಗದಲ್ಲಿ 2022ರ ವೇಳೆಗೆ ಮೆಟ್ರೋ ಸಂಚಾರ ಆರಂಭಿಸುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.