51 ಶಿಕ್ಷಕರಿಗೆ ಕೋವಿಡ್-19 ಪರೀಕ್ಷೆ

CHMD 29-1
Published on

ಚಿಮ್ಮಡ: ಜನವರಿ ಒಂದರಿಂದ ಶಾಲೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆದೇಶದಂತೆ ಚಿಮ್ಮಡ ಗ್ರಾಮದಲ್ಲಿ ಶಿಕ್ಷಕರಿಗೆ ಸೋಮವಾರ ಕೋವಿಡ್-19 ಪರೀಕ್ಷೆ ನಡೆಸಲಾಯಿತು. ಗಂಟಲು ದ್ರವ ಸಂಗ್ರಹಿಸಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.

ವೈದ್ಯಾಧಿಕಾರಿ ಡಾ.ಜೆ.ಎಸ್.ದಿವಾಣ ಮಾತನಾಡಿ, ಸೋಮವಾರ 51 ಶಿಕ್ಷಕರ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್.ರೂಗಿ, ಹಿರಿಯ ಆರೋಗ್ಯ ಸಹಾಯಕ ಜಿ.ಎಸ್.ಮಸಳಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಔಷಧ ವಿತರಕಿ ಬಿ.ವಿ.ಗಂಗಾವತಿ ಇನ್ನಿತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net