ಚಿಲವಾರಬಂಡಿ ಏತನೀರಾವರಿ ಪ್ರಾಯೋಗಿಕ ಜಾರಿ ಶೀಘ್ರ

9 hbh 01
ಹಗರಿಬೊಮ್ಮನಹಳ್ಳಿ ತಾಲೂಕಿನ ಕಾತ್ಯಾಯಿನಿಮರಡಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ನೇಮಿರಾಜ್ ನಾಯ್ಕ ಭೂಮಿ ಪೂಜೆ ನೆರವೇರಿಸಿದರು. ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ, ಕನ್ನಿಹಳ್ಳಿ ಚಂದ್ರಶೇಖರ, ಚಿತ್ತವಾಡ್ಗಿ ಪ್ರಕಾಶ, ಹೋಟೆಲ್ ಸಿದ್ದರಾಜ, ಗ್ರಾಪಂ ಸದಸ್ಯರಾದ ರಮೇಶ ಛಲವಾದಿ, ಸಂತೋಷ, ಕೆ.ರಾಜೀವ್, ಮಾಜಿ ಸದಸ್ಯ ಕೆ.ಕೆ.ಬಿ.ಎಂ.ಶಶಿಧರ ಸ್ವಾಮಿ, ಬ್ಯಾಟಿ ನಾಗರಾಜ, ವೈ.ಮಲ್ಲಿಕಾರ್ಜುನ ಮತ್ತಿತರರು ಇದ್ದರು.
Published on

ಹಗರಿಬೊಮ್ಮನಹಳ್ಳಿ: ಕ್ಷೇತ್ರ ವ್ಯಾಪ್ತಿಯಲ್ಲಿ 150 ಚೆಕ್ ಡ್ಯಾಂಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ತಿಳಿಸಿದರು.

ಪಿಂಜಾರ ಹೆಗ್ಡಾಳ್, ಅಂಕಸಮುದ್ರ, ಯಡ್ರಮ್ಮನಹಳ್ಳಿ, ಚಿಕ್ಕಸಬಟಿ, ಹಿರೇಸಾಬಟಿ, ಕಾತ್ಯಾಯಿನಿಮರಡಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಅವಶ್ಯವಿರುವ ಕಡೆ, ಮಳೆಗಾಲದಲ್ಲಿ ನೀರು ಪೋಲಾಗದಂತೆ ಕ್ರಮವಹಿಸಿ, ಅಂತರ್ಜಲ ಹೆಚ್ಚಾಗುವಂತೆ, ಬರಡು ಭೂಮಿಗಳು ಸಹ ಹಸಿರಿನಿಂದ ಕಂಗೊಳಿಸುವಂತೆ ಚೆಕ್‌ಡ್ಯಾಂಗಳ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಅನವಶ್ಯಕ ಯೋಜನೆಗಳನ್ನು ಜಾರಿಗೆ ತರುವುದಕ್ಕಿಂತ ಕೂಲಿ ಕಾರ್ಮಿಕರಿಗಾಗಿ ಸೌಲಭ್ಯಗಳನ್ನು ಜಾರಿಗೊಳಿಸಿ ಆ ಮೂಲಕ ಜನರಿಗೆ ಹತ್ತಿರವಾಗುವಂತ ಕೆಲಸಮಾಡಬೇಕು. ಕಡಲಬಾಳು ಚಿಲವಾರ ಬಂಡಿ ಏತನೀರಾವರಿ ಕಾಮಗಾರಿ ಪೂರ್ಣ ಮುಗಿದಿದ್ದು, ಶೀಘ್ರದಲ್ಲೇ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು ಎಂದು ಶಾಸಕ ತಿಳಿಸಿದರು.

ಪ್ರಮುಖರಾದ ಎಂ.ಎಂ.ಶಾಂತವೀರ, ಎಂ.ಎಂ.ಕೊಟ್ರಯ್ಯ, ಡಿ.ಎಂ.ನೀಲಮ್ಮ, ಮೀಸೆ ಮಲ್ಲಿಕಾರ್ಜುನ, ಚನ್ನವೀರಮ್ಮ, ಪಂಪಮ್ಮ, ಹುಲಿಗೆಮ್ಮ, ಎಂ.ಪಿ.ಎಂ.ಬಸುರಾಜ, ಕೆ.ಕೆ.ಬಿ.ಎಂ.ಸುರೇಶ, ಚಿದಂಬರಾಚಾರಿ, ಕೆ.ತಿಂದಪ್ಪ, ಬಸಯ್ಯ, ಚನ್ನನಗೌಡ, ಡಿ.ಎಂ.ಶಿವಯೋಗಿ, ಬಾರಿಕರ ಭೀಮಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net