

ಬಳ್ಳಾರಿ: ಮೆಣಸಿನಕಾಯಿ ಬೀಜಕ್ಕಾಗಿ ರೈತ ಮುಗಿಬಿದ್ದ ಘಟನೆ ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ರೈತ ಸಂಪರ್ಕ ಕಚೇರಿಯಲ್ಲಿ ನಡೆದಿದೆ.
ಮೆಣಸಿನಕಾಯಿ ಬೀಜ ಬಿತ್ತನೆಗೆ ಕೆಲವೇ ದಿನಗಳು ಸಮಯವಿರುವ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಬಳ್ಳಾರಿ ಜಿಲ್ಲೆಯಲ್ಲಿ ಬೀಜಕ್ಕಾಗಿ ರೈತರ ಪರದಾಡುತ್ತಿದ್ದಾರೆ.
ಮೊನ್ನೆ ಲಾಟಿ ಚಾರ್ಜ್, ನಿನ್ನೆ ನೂಕು ನುಗ್ಗಲು ಆಗಿದ್ದರೂ ರೈತರ ಸಮಸ್ಯೆಗೆ ಜನಪ್ರತಿನಿಧಿಗಳು ಮಾತ್ರ ಸ್ಪಂದಿಸುತ್ತಿಲ್ಲ. ಕರೊನಾ ಇದ್ದರೂ ರೈತರು ಮೆಣಸಿನಕಾಯಿ ಬೀಜಕ್ಕೆ ನೂಕುನುಗ್ಗಲಿನಲ್ಲಿ ನಿಂತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.