ಬ್ಯಾಡಗಿ ಮಾರುಕಟ್ಟೆಯಲ್ಲಿ 2 ಲಕ್ಷ ಚೀಲ ದಾಟಿದ ಮೆಣಸಿನಕಾಯಿ ಆವಕ

20-BYD---1- CHILLY
Published on

ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರದ ಟೆಂಡರ್​ನಲ್ಲಿ ಎರಡು ಲಕ್ಷಕ್ಕೂ ಅಧಿಕ ಚೀಲಗಳು ಆವಕವಾಗಿದ್ದು, ಮಾರುಕಟ್ಟೆ ಶುಲ್ಕ ಸುಮಾರು 20 ಲಕ್ಷ ರೂ. ದಾಟಿದೆ.

ಪ್ರಸಕ್ತ ಸಾಲಿನ ಜನವರಿ ಮೊದಲ ವಾರದಿಂದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವ್ಯಾಪಾರ ತೀವ್ರ ಏರಿಕೆ ಕಂಡುಬಂದಿದ್ದು, ಈವರೆಗೆ 8 ಬಾರಿ ಲಕ್ಷ ಚೀಲ ಹಾಗೂ 2 ಬಾರಿ 2 ಲಕ್ಷಕ್ಕೂ ಅಧಿಕ ಚೀಲಗಳ ಆವಕವಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ತುಸು ಇಳಿಮುಖವಾಗಿದ್ದು, ಗುಣಮಟ್ಟದ ಮೆಣಸಿನಕಾಯಿಗಳಿಗೆ ಹೆಚ್ಚು ದರ ಲಭಿಸುತ್ತಿದೆ. ಕಳೆದ ಬಾರಿ ಫೆಬ್ರವರಿಯಲ್ಲಿ ಸತತ 2ರಿಂದ 3 ಲಕ್ಷದ ಆವಕದಿಂದ ಭರ್ಜರಿ ವ್ಯಾಪಾರ ಹಾಗೂ ಬಾರಿ ಬೆಲೆ ರೈತರಿಗೆ ಲಭಿಸಿತ್ತು. ಈ ಬಾರಿ ಮೆಣಸಿನಕಾಯಿ ಬೆಳೆ ಹೆಚ್ಚಳ ಹಾಗೂ ಇತರ ಕಾರಣದಿಂದ ತುಸು ಬೆಲೆ ಕುಸಿದಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net