ಮೆಣಸಿನಕಾಯಿ, ಭತ್ತ ಬೆಳೆನಷ್ಟ: ಕುರುಗೋಡು ತಾಲೂಕಿನಲ್ಲಿ ರೈತ ಆತ್ಮಹತ್ಯೆ

Chanalu Farmer Suicide Narasimha Reddy
ಹೊಸಮನೆ ನರಸಿಂಹ ರೆಡ್ಡಿ
Published on

ಕುರುಗೋಡು: ಬೆಳೆನಷ್ಟ, ಸಾಲಬಾಧೆ ತಾಳದೆ ಸಮೀಪದ ಚಾನಾಳು ಗ್ರಾಮದ ರೈತ ಹೊಸಮನೆ ನರಸಿಂಹ ರೆಡ್ಡಿ (60) ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಪತ್ನಿ, ಮಗ ಇದ್ದಾರೆ. 10 ಎಕರೆ ಮೆಣಸಿಕಾಯಿ ಹಾಗೂ 20 ಎಕರೆಯಲ್ಲಿ ಭತ್ತ ಬೆಳೆ ಬೆಳೆದಿದ್ದರು, ಅಕಾಲಿಕ ಮಳೆಯಿಂದ ಅಪಾರ ನಷ್ಟವಾಗಿದೆ. 15 ಲಕ್ಷ ರೂ.ಸಾಲ ಮಾಡಿದ್ದರು ಎನ್ನಲಾಗಿದೆ. ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net