

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಶಿಕ್ಷಣವು ಓದು, ಬರಹ ಹಾಗೂ ತರಗತಿಗೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳ ಬೌದ್ಧಿಕ ಗುಣಮಟ್ಟ ವೃದ್ಧಿಸಲು ಪಠ್ಯೇತರ ಚಟುವಟಿಕೆಗಳೂ ಅಗತ್ಯ ಎಂದು ಬಂಟ್ವಾಳ ತಾಲೂಕು ಸರ್ಕಾರಿ ನೌಕರರ ಸಂಘ ನಿಕಟಪೂರ್ವ ಅಧ್ಯಕ್ಷ ಉಮಾನಾಥ ರೈ ಮೇರಾವ್ ಅಭಿಪ್ರಾಯಪಟ್ಟರು.
ಮಂಚಿಯ ಚಿಲಿಪಿಲಿ ಬಳಗ ಹಾಗೂ ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ಚಿಲಿಪಿಲಿ, ಏಳನೇ ವರ್ಷದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಂಚಿ ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಗೋಪಾಲ್ ಆಚಾರ್ ಶಿಬಿರ ಉದ್ಘಾಟಿಸಿದರು. ಬಂಟ್ವಾಳ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಮಾನಂದ ನೂಜಿಪ್ಪಾಡಿ ಶುಭಹಾರೈಸಿದರು. ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್ ರೈ ಮೇರಾವ್, ಮಂಚಿ ಲಿಯೋ ಕ್ಲಬ್ ಅಧ್ಯಕ್ಷೆ ಶೀತಲ್, ಚಿಲಿಪಿಲಿ ಬಳಗದ ಸಂಚಾಲಕಿ ಶಾರದಾ ಹಾಜರಿದ್ದರು. ಕವಿತಾ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಗೀತಾ ಮಂಚಿ ವಂದಿಸಿದರು. ಕೃಷ್ಣಮೋಹನ ನಿರೂಪಿಸಿದರು. ಕಲಾ ಶಿಕ್ಷಕ ಕೆ.ಬಾಲಕೃಷ್ಣ ಶೆಟ್ಟಿ ಸಂಯೋಜನೆಯಲ್ಲಿ ಶಿಬಿರ ಆಯೋಜನೆಗೊಂಡಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ನಾ.ದಾ. ಮಣಿನಾಲ್ಕೂರು, ಭಾಸ್ಕರ್ ನೆಲ್ಯಾಡಿ, ಮೌನೇಶ್ ವಿಶ್ವಕರ್ಮ, ಮಂಜುನಾಥ್ ನಾಯ್ಕ ಕಿನ್ನಿಗೋಳಿ ಸಹಕರಿಸಲಿದ್ದಾರೆ.