

ತೆಲಸಂಗ: ಗ್ರಾಮದ ಸಣ್ಣೆಪ್ಪ ಸತ್ಯಪ್ಪ ದೇವರ ಜಾತ್ರೆಯನ್ನು ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಡೊಳ್ಳಿನ ಕುಣಿತ
ಭಕ್ತರನ್ನು ರಂಜಿಸಿತು. ಲಕ್ಷ್ಮೀ ರೂಪದಲ್ಲಿ ಕಾಣುವ ಕುರಿಗಳಿಗೆ ಬಣ್ಣದಿಂದ ಅಲಂಕರಿಸಿ ಪಲ್ಲಕ್ಕಿ ಸುತ್ತಿಸಿ ಕೂಗಾಡಿ ಓಡಾಡಿಸಿದ ಗುರಿಗಾಹಿಗಳು, ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು. ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.