ವೈದ್ಯರ ನಿರ್ಲಕ್ಷ ಮಗು ಸಾವು: ಆರೋಪ

DR.SURENDRABABU
ಡಾ.ಸುರೇಂದ್ರಬಾಬು ಭೇಟಿ
Published on

ರಾಯಚೂರು ರಾಜ್ಯದಲ್ಲಿ ಗರ್ಭಿಣೀಯರ ಸಾವಿನ ಪ್ರಕರಣಗಳ ನಂತರ ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಶಿಶು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮಾನ್ವಿ ತಾಲೂಕಿನ ಬೈಲ್ ಮರ್ಚೇಡ್ ಗ್ರಾಮದ ಗರ್ಭಿಣಿ ಪಾರ್ವತಿ ಅವರು -ೆ.೦೭ ರಂದು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮೊದಲ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಸಾಮಾನ್ಯ ಹೆರಿಗೆಯಾಗದೆ ಇರುವುದರಿಂದ ಆತಂಕಗೊAಡ ಕುಟುಂಬಸ್ಥರು ಸಿಸರಿನ್ ಹೆರಿಗೆ ಮಾಡಿ ಎಂದು ಎಷ್ಟೆ ಕೇಳಿಕೊಂಡರೂ. ವೈದ್ಯರು ಇಲ್ಲ ಸಾಮಾನ್ಯ ಹೆರಿಗೆಯೇ ಮಾಡೋಣ ಎಂದು ಹೇಳಿ. ಹೆರಿಗೆಗೆ ಮುಂದಾಗಿದ್ದು, ಇದೇ ಕಾರಣಕ್ಕೆ ಮಗು ಸಾವನಪ್ಪಿದೆ ಎಂದು ಗರ್ಭಿಣೀಯ ಸಂಬAಽಕರು ಆರೋಪಿಸುತ್ತಿದ್ದಾರೆ.

ಭಾನುವಾರ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ.ಸುರೇಂದ್ರಬಾಬು ಭೇಟಿ ನೀಡಿ

ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳೊAದಿಗೆ ಆಂತರಿಕ ಸಭೆ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಮಗು ಸಾವನಪ್ಪಿರುವುದು ವಿಷಾದದ ಸಂಗತಿಯೇ. ಘಟನೆಯ ಕುರಿತು ಪರಿಶೀಲನೆ

ನಡೆಸಲಾಗುವುದು. ಅಽಕಾರಿಗಳು ಅಥವಾ ಸಿಬ್ಬಂದಿಯ ತಪ್ಪು ಕಂಡುಬAದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ

ಜರುಗಿಸಲಾಗುವುದು ಎಂದು ತಿಳಿಸಿದರು.

-----------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net