ಮಾ.16ಕ್ಕೆ 'ಮಕ್ಕಳ ಯಕ್ಷಗಾನ ರಂಗಭೂಮಿ' ವಿಚಾರ ಗೋಷ್ಠಿ...

Yakshagana Lead
Published on

ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೋಟದ ಸಾಲಿಗ್ರಾಮ ಮಕ್ಕಳ ಮೇಳವು 50ರ ಸಂಭ್ರಮದಲ್ಲಿದ್ದು, ಸುವರ್ಣ ಪರ್ವ-8ರ ನಿಮಿತ್ತ ಉಡುಪಿಯ ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ ಮಾ.16ರಂದು ಮಕ್ಕಳ ಯಕ್ಷಗಾನ ರಂಗಭೂಮಿ ಕುರಿತು ವಿಚಾರಗೋಷ್ಠಿ ಹಾಗೂ ಮಕ್ಕಳ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.

Yakshagana 2
ಉಡುಪಿಯ ಐವೈಸಿ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ್​ ಎಂ. ರಾವ್​. ಅಧ್ಯಕ್ಷತೆ ವಹಿಸಲಿದ್ದಾರೆ.

ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ್​ ಜೋಷಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಲ. ಸುರೇಶ್​ ಪ್ರಭು, ಭುವನ ಪ್ರಸಾದ ಹೆಗ್ಡೆ, ಲ. ವಿ.ಜಿ. ಶೆಟ್ಟಿ, ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್​. ಶ್ರೀಧರ ಹಂದೆ, ಅಧ್ಯಕ್ಷ ಬಲರಾಮ್​ ಕಲ್ಕೂರ, ಕಾರ್ಯಾಧ್ಯಕ್ಷ ಮಹೇಶ್​ ಉಡುಪ ಕೆ., ಉಪಾಧ್ಯಕ್ಷ ಜನಾರ್ದನ್​ ಹಂದೆ ಪಾಲ್ಗೊಳ್ಳಲಿದ್ದಾರೆ. ಸಾಧಕ ಬಿ.ಕೇಶವ್​ ಬಡಾನಿಡಿಯೂರು ಅವರ ಸನ್ಮಾನ ನಡೆಯಲಿದೆ.

ಬೆಳಗ್ಗೆ 11ಕ್ಕೆ ಯಕ್ಷಗಾನ ಪ್ರಾಚಾರ್ಯ ಗುಂಡ್ಮಿ ಸದಾನಂದ್​ ಐತಾಳ ಅಧ್ಯಕ್ಷತೆಯಲ್ಲಿ ವಿಚಾರ ಗೋಷ್ಠಿ ನಡೆಯಲಿದೆ. ಯಕ್ಷ ಸಾಹಿತಿ ಪ್ರೊ.ಶ್ರೀಧರ್​ ಡಿ.ಎಸ್​., ಯಕ್ಷ ಗುರು ಪ್ರಸಾದಕುಮಾರ್​ ಮೊಗೆಬೆಟ್ಟು, ಬ್ರಹ್ಮಾವರದ ರಂಗಕರ್ಮಿ ಅಭಿಲಾಷ ಎಸ್​., ಯಕ್ಷ ಗುರು ದೇವದಾಸ ರಾವ್​ ಕೂಡ್ಲಿ, ಪತ್ರಕರ್ತೆ ರಾಜಲಕ್ಷ್ಮೀ ಕೋಡಿಬೆಟ್ಟು ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

Yakshagana 3
ಮಧ್ಯಾಹ್ನ 2 ಗಂಟೆಗೆ ರಾಜೇಶ್​ ಕಟೀಲು ನಿರ್ದೇಶನದಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಅವರಿಂದ ಸುದರ್ಶನ ವಿಜಯ ಯಕ್ಷಗಾನ ನಡೆಯಲಿದೆ ಎಂದು ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net