ಎಫ್‌ ಸಿಐ ಗೋದಾಮಿಗೆ ವಿದ್ಯಾರ್ಥಿಗಳ ಭೇಟಿ

IMG_20230719_204012_157-2.jpg
Published on

ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆಯ ವಲ್ಲಭಬಾಯಿ ನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾಥಿರ್ಗಳು ನಗರದ ಬಮ್ಮಾಪುರದಲ್ಲಿರುವ ಭಾರತೀಯ ಆಹಾರ ನಿಗಮದ (ಎಫ್ ಸಿಐ) ಗೋದಾಮಿಗೆ ಬುಧವಾರ ಭೇಟಿ ನೀಡಿದರು.

ಗೋದಾಮಿನಲ್ಲಿ ಅಕ್ಕಿ, ಇತರ ಧಾನ್ಯಗಳ ಸಂಗ್ರಹ ಮತ್ತು ಅವುಗಳ ವಿತರಣೆ ವ್ಯವಸ್ಥೆ ಬಗ್ಗೆ ಅರಿತುಕೊಂಡರು.

ಗೋದಾಮಿನ ವಿವಿಧ ವಿಭಾಗಗಳನ್ನು ವೀಕ್ಷಣೆ ಮಾಡಿದ ಮಕ್ಕಳಿಗೆ, ಕೇಂದ್ರ ಸರ್ಕಾರವು ದವಸ ಧಾನ್ಯಗಳನ್ನು ಇಲ್ಲಿ ಸಂಗ್ರಹಿಸುತ್ತದೆ. ಇದನ್ನು ರಾಜ್ಯ ಸರ್ಕಾರದ ಪಡಿತರ ವ್ಯವಸ್ಥೆಯಡಿ ವಿತರಣೆಗೆ ಹಾಗೂ ವಿವಿಧ ಯೋಜನೆಗಳಾದ ಅಂತ್ಯೋದಯ, ಹಾಸ್ಟೇಲ್ ಮುಂತಾದೆಡೆ ವಿತರಣೆಗೆ ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಎಫ್ ಸಿಐ ವ್ಯವಸ್ಥಾಪಕ ವಿ. ರಾಮ ಮೂರ್ತಿ ಮಾತನಾಡಿ, ಫೋರ್ಟಿಫೈಡ್ ರೈಸ್' ಇದು ನೋಡಲು ಪ್ಲಾಸ್ಟಿಕ್ ಅಕ್ಕಿಯಂತೆ ಕಾಣುತ್ತದೆ. ಆದರೆ, ಇದು ಸಾರವಧಿರ್ತ ಅಕ್ಕಿಯಾಗಿದೆ. ಇದು ಅತ್ಯುತ್ತಮ ವಿಟಮಿನ್ ಹೊಂದಿದೆ. ಅಪೌಷ್ಟಿಕತೆ ದೂರ ಮಾಡುತ್ತದೆ ಎಂದರು.

ಮಕ್ಕಳ ಬೆಳವಣಿಗೆಗೆ ಇದು ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ. ಗರ್ಭಿಣಿಯರಿಗೆ ಇದರಲ್ಲಿನ ವಿಟಮಿನ್ 1, ವಿಟಮಿನ್ ಬಿ ಒನ್, ಬಿ ಟ್ವೆಲ್ವ, ಫಾಲಿಕ್ ಆ್ಯಸಿಡ್ ಹಾಗೂ ಜಿಂಕ್ ಮುಂತಾದವು ಹೆಚ್ಚು ಅನುಕೂಲಕರ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net